ಮಂಗಳವಾರ, ಜನವರಿ 21, 2025

ಜ.22 ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜ.21(ಕರ್ನಾಟಕ ವಾರ್ತೆ): ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 220/11 ಕೆವಿ ಅಲ್ಲೀಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ತ್ರೆöÊಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ಜ.22 ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 05 ಗಂಟೆಯವರೆಗೆ ಬ್ಯಾಂಕ್-2 ಫೀಡರ್‌ಗಳಾದ ಎಫ್-34, ಎಫ್-36, ಎಫ್-40, ಎಫ್-75, ಎಫ್-76 ಮತ್ತು ಎಫ್-77 ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ನಗರದ ವಿನಾಯಕ ನಗರ ಬಡಾವಣೆ, ಕಂಟೋನ್‌ಮೆAಟ್, ಐಶ್ವರ್ಯ ಕಾಲೋನಿ, ಐಟಿಐ ಕಾಲೇಜ್, ರೇಡೀಯೋ ಪಾರ್ಕ್, ಕೌಲ್ ಬಜಾರ್ ಮುಖ್ಯ ರಸ್ತೆ, ಟೈಲರ್ ಬೀದಿ, ಕುವೆಂಪು ನಗರ, ಜಯನಗರ, ಚಂದ್ರ ಕಾಲೋನಿ, ರಾಮಾಂಜಿನೇಯ ನಗರ, ಸಿಎಂಸಿ ಕಾಲೋನಿ, ಎಕ್ಸ್ ಸರ್ವಿಸ್‌ಮೆನ್ ಕಾಲೋನಿ, ಅರಣ್ಯ ಕ್ವಾಟರ್ಸ್, ಜಾಗೃತಿ ನಗರ, ಟ್ರಾಮಾ ಕೇರ್ ಸೆಂಟರ್ ಮತ್ತು ಜಲ ಶುದ್ಧೀಕರಣ ಕೇಂದ್ರ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ