ಬುಧವಾರ, ಜೂನ್ 11, 2025
ಬಳ್ಳಾರಿ: ಜೂ.15 ರ ವರೆಗೆ ರಾಷ್ಟಿçÃಯ ಶಸ್ತçಚಿಕಿತ್ಸಕರ ವಾರಾಚರಣೆ
ಬಳ್ಳಾರಿ,ಜೂ.11(ಕರ್ನಾಟಕ ವಾರ್ತೆ):
ರಾಷ್ಟಿçÃಯ ಶಸ್ತçಚಿಕಿತ್ಸಕರ ವಾರಾಚರಣೆ ನಿಮಿತ್ತವಾಗಿ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ - ಬಳ್ಳಾರಿ ಶಾಖೆ ವತಿಯಿಂದ ಜೂ.15 ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳ್ಳಾರಿ ಶಾಖೆ ಅಧ್ಯಕ್ಷ ಡಾ.ಶೇಕಪ್ಪ ಮಾಳಗಿಮನಿ ಮತ್ತು ಕಾರ್ಯದರ್ಶಿ ಡಾ.ಗುಡೇಕೋಟೆ ರವಿಕುಮಾರ ಅವರು ತಿಳಿಸಿದ್ದಾರೆ.
ಜೂ.11 ರಂದು ಸಸಿ ನೆಡುವ ಕಾರ್ಯಕ್ರಮ, ಜೂ.12 ರಂದು ಬೀದಿ ನಾಟಕ(ಸಾಮಾಜಿಕ ಕಳಕಳಿ), ಜೂ.13 ರಂದು ಉಚಿತ ತಪಾಸಣೆ, ಶಸ್ತçಚಿಕಿತ್ಸೆ (ನಗರದ ನುರಿತ ವೈದ್ಯರಿಂದ ತಮ್ಮ ಆಸ್ಪತ್ರೆಗಳಲ್ಲಿ ತಮ್ಮ ವೈಯಕ್ತಿಕ ಸಾಮರ್ಥ್ಯಕ್ಕನುಸಾರ ಅರ್ಹ ರೋಗಿಗಳಿಗೆ), ಜೂ.14 ರಂದು ಬೃಹತ್ ರಕ್ತದಾನ ಶಿಬಿರ (ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಪ್ರಾಂಗಣ) ಮತ್ತು ಜೂ.15 ರಂದು ರಾಷ್ಟಿçÃಯ ಶಸ್ತçಚಿಕಿತ್ಸಾ ದಿನಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಗಳಲ್ಲಿ ಬಿಎಂಸಿಆರ್‌ಸಿ ಯ ನಿರ್ದೇಶಕ ಡಾ.ಗಂಗಾಧರ ಗೌಡ, ಎಎಸ್‌ಐ ನ ರಾಷ್ಟಿçÃಯ ಕಾರ್ಯದರ್ಶಿ ಡಾ.ಗಡ್ಡಿ ದಿವಾಕರ, ಕೆಎಸ್‌ಸಿಎಎಸ್‌ಐ ಖಜಾಂಚಿ ಡಾ.ವೈ.ಗುರುಬಸವನ ಗೌಡ, ಬಿಎಂಸಿಆರ್‌ಸಿ ಶಸ್ತçಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಕಾಸಾ ಸೋಮಶೇಖರ್ ಹಾಗೂ ಶಸ್ತçಚಿಕಿತ್ಸಾ ವಿಭಾಗದ ಸಿಬ್ಬಂದಿಗಳು, ಸೂಪರ್ ಸ್ಪೆಷಾಲಿಟಿ ವೈದ್ಯರುಗಳು ಮತ್ತು ನಗರದ ನುರಿತ ಶಸ್ತçಚಿಕಿತ್ಸಾ ತಜ್ಞರುಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ತಿಳಿಸಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ