ಬುಧವಾರ, ಜೂನ್ 25, 2025
ಮೃತ ಅನಾಮಧೇಯ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಜೂ.25(ಕರ್ನಾಟಕ ವಾರ್ತೆ):
ನಗರದ ಎಪಿಎಂಸಿ ಆವರಣದಲ್ಲಿರುವ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಚಿತ ಆಸ್ಪತ್ರೆ ಮುಂದಿನ ಶೆಡ್‌ನಲ್ಲಿ ಸುಮಾರು 35-45 ವರ್ಷದ ಅನಾಮಧೇಯ ವ್ಯಕ್ತಿಯು ಜೂ.24 ರಂದು ಮೃತಪಟ್ಟಿದ್ದು, ಮೃತನ ವಾರಸುದಾರರು ತಿಳಿದಿರುವುದಿಲ್ಲ. ಈ ಕುರಿತು ಎಪಿಎಂಸಿ ಯಾರ್ಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಚಹರೆ ಗುರುತು:
ಎತ್ತರ 5.7 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ತಲೆಯಲ್ಲಿ 03 ಇಂಚು ಕಪ್ಪು ಕೂದಲು ಮತ್ತು 02 ಇಂಚು ಉದ್ದ ಕಪ್ಪು ಮೀಸೆ ಮುಖದಲ್ಲಿ 01 ಇಂಚು ಕಪ್ಪು ಗಡ್ಡ ಹೊಂದಿರುತ್ತಾನೆ. ಮೃತನ ಬಲಗೈ ಮತ್ತು ಎಡ ಎದೆಯ ಮೇಲೆ ಇಂಗ್ಲೀಷ್‌ನಲ್ಲಿ ಪೂಜ ಎಂದು ಕಪ್ಪು ಅಚ್ಚೆ ಗುರುತು ಇರುತ್ತದೆ.
ಮೃತನು ಒಂದು ಮಾಸಿದ ಮತ್ತು ಕಪ್ಪು ಬಣ್ಣ ಮಿಶ್ರಿತ ಗೆರೆಗಳ್ಳುಳ್ಳ ಅರ್ಧ ತೋಳಿನ ಅಂಗಿ ಮತ್ತು ಕಪ್ಪು ನೀಲಿ ಗೆರೆಗಳ್ಳುಳ್ಳ ಲುಂಗಿ ಹಾಗೂ ನೇರಳೆ ಬಣ್ಣದ ಚಡ್ಡಿ ಧರಿಸಿರುತ್ತಾನೆ.
ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100, 258102 ಅಥವಾ ಎಪಿಎಂಸಿ ಯಾರ್ಡ ಪೊಲೀಸ್ ಠಾಣೆಯ ದೂ.08392-250033, 9480803096, ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ