ಶನಿವಾರ, ಜೂನ್ 21, 2025
ಬಳ್ಳಾರಿ: ಭೂದಾಖಲೆಗಳ ಇ-ಖಜಾನೆಗೆ ಚಾಲನೆ ನೀಡಿದ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝಬೇರ್
ಬಳ್ಳಾರಿ,ಜೂ.21(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ಭೂ ಸುರಕ್ಷಾ ಯೋಜನೆ ದಾಖಲೆಗಳ ಡಿಜಿಟಲೀಕರಣ ಈಗಾಗಲೇ ಕಾರ್ಯ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಎನ್.ಝಬೇರ್ ಅವರು ನಗರದ ಹೊಸ ಜಿಲ್ಲಾಡಳಿ ಭವನದ ಭೂ ದಾಖಲೆಗಳ ಇ-ಖಜಾನೆ(ಆಧುನಿಕ ಅಭಿಲೇಖಾಲಯ)ಗೆÀ ಶನಿವಾರ ಭೇಟಿ ನೀಡಿ ಚಾಲನೆಗೊಳಿಸಿ ಸಾಂಕೇತಿಕವಾಗಿ ಗಣಕೀಕೃತ ಪ್ರತಿಗಳನ್ನು ರೈತರಿಗೆ ನೀಡಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭೂ ಸುರಕ್ಷಾ ಯೋಜನೆಯಡಿ ಜಿಲ್ಲೆಯ ಕಂದಾಯ ಇಲಾಖೆಯ ಎಲ್ಲಾ ದಾಖಲೆಗಳನ್ನು ಗಣಕೀಕರಣ ಮಾಡುವ ಕಾರ್ಯ ಈಗಾಗಲೇ ಆರಂಭಿಸಲಾಗಿದೆ. ಡಿಜಿಟಲೀಕರಣಗೊಂಡ ಕಡತ ಮತ್ತು ವಹಿಗಳನ್ನು ಡಿಜಿಟಲ್ ಮಾದರಿಯಲ್ಲಿ ಜುಲೈ 01 ರಿಂದ ಕಡ್ಡಾಯವಾಗಿ ಡಿಜಿಟಲ್ ದಾಖಲೆಯನ್ನು ನೀಡುವ ವ್ಯವಸ್ಥೆಯನ್ನು ಎಲ್ಲಾ ತಾಲ್ಲೂಕುಗಳಲ್ಲಿ ಪ್ರಾರಂಭಿಸಲು ಸರ್ಕಾರದ ಆದೇಶವಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕಡತ ಮತ್ತು ವಹಿಗಳ ಡಿಜಿಟಲ್ ದಾಖಲೆಯನ್ನು ನೀಡುವ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕುರುಗೋಡು ತಾಲ್ಲೂಕನ್ನು ಪೈಲಟ್ ತಾಲ್ಲೂಕನ್ನಾಗಿ ಕೈಗೆತ್ತಿಕೊಂಡು 73,815 ಕಡತಗಳ ಪೈಕಿ ಈಗಾಗಲೇ 73,815 ಕಡತಗಳನ್ನು ಸಂಪೂರ್ಣವಾಗಿ ಗಣಕೀಕರಣ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 6,18,185 ಕಡತಗಳ ಪೈಕಿ 1,52,324 ಕಡತಗಳನ್ನು ಗಣಕೀಕರಣ ಮಾಡಲಾಗಿದೆ. ದಾಖಲಾತಿಗಳ ಗಣಕೀಕರಣದಿಂದ ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಸುಲಭವಾಗಿ ದಾಖಲಾತಿಗಳು ದೊರಕಲಿವೆ ಎಂದು ತಿಳಿಸಿದರು.
ಸಾರ್ವಜನಿಕರು ತಮ್ಮ ದಾಖಲೆಗಳನ್ನು ಅಭಿಲೇಖಾಲಯದ (https://recordroom.karnataka.gov.in/ERECORDROOM/) ತಂತ್ರಾAಶದ ಮೂಲಕ ಪಡೆದುಕೊಳ್ಳಬಹುದು. ಇದರೊಂದಿಗೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ದಾಖಲೆಯನ್ನು ಡಿಜಿಟಲ್ ರೂಪದಲ್ಲಿ ಸಹ ಪಡೆಯಬಹುದು ಎಂದು ತಿಳಿಸಿದರು.
ಈಗಾಗಲೇ ಡಿಜಿಟಲ್‌ಗೊಂಡ ಕಡತ ಮತ್ತು ವಹಿಗಳನ್ನು ಅರ್ಜಿ ನೀಡಿದ ಸಮಯದಲ್ಲಿ ನೀಡಲಾಗುವುದು ಹಾಗೂ ಡಿಜಿಟಲೀಕರಣಕ್ಕೆ ಬಾಕಿ ಇರುವ ಕಡತ ಮತ್ತು ವಹಿಗಳನ್ನು 07 ದಿನಗಳ ಒಳಗೆ ಡಿಜಿಟಲೀಕರಣಗೊಳಿಸಿ ದಾಖಲೆಯನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ತಾಲ್ಲೂಕು ತಹಶೀಲ್ದಾರ್ ರೇಖಾ.ಟಿ ಮತ್ತು ಇಲಾಖೆಯ ಸಿಬ್ಬಂದಿಗಳು ರೈತರು ಮತ್ತು ಸಾರ್ವಜನಿಕರು ಇದ್ದರು.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ