ಬುಧವಾರ, ಜೂನ್ 18, 2025

ವ್ಯಕ್ತಿ ಕಾಣೆ ಪತ್ತೆಗೆ ಮನವಿ

ಬಳ್ಳಾರಿ,ಜೂ.18(ಕರ್ನಾಟಕ ವಾರ್ತೆ): ಸಿರುಗುಪ್ಪ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಎದುರುಗಡೆ 15ನೇ ವಾರ್ಡ್ ಬಾಲಾಜೀ ಲೇ-ಔಟ್‌ನ ಹತ್ತಿರ ಮ್ಯಾನೇಜರ್ ಕೆಲಸ ನಿರ್ವಹಿಸುತ್ತಿದ್ದ ಅಂಬರೇಶ್.ಎಸ್ ಎನ್ನುವ 53 ವರ್ಷದ ವ್ಯಕ್ತಿ ಜೂ.14 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಸಿರಗುಪ್ಪ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರು ಮನವಿ ಮಾಡಿದ್ದಾರೆ. *ವ್ಯಕ್ತಿಯ ಚಹರೆ:* ಎತ್ತರ 5.10 ಅಡಿ, ಕೋಲು ಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಇದ್ದು, ಮುಖದ ಎಡಭಾಗದಲ್ಲಿ ಕಪ್ಪು ಮಚ್ಚೆ ಹೊಂದಿರುತ್ತಾನೆ. ವ್ಯಕ್ತಿಯು ಕಾಣೆಯಾದ ಸಂದರ್ಭದಲ್ಲಿ ಕ್ರೀಮ್ ಕಲರ್ ತುಂಬು ತೋಳಿನ ಅಂಗಿ, ಅರ್ಧ ತೋಳಿನ ಬಿಳಿ ಬಣ್ಣದ ಬನಿಯನ್, ಲೈಟ್ ಬ್ರೌನ್ ಕಲರಿನ ಚಿಕ್ಕ ಲೈನ್‌ಗಳಿರುವ ಪ್ಯಾಂಟ್ ಮತ್ತು ನೀಲಿ ಅಂಡರ್‌ವೇರ್ ಧರಿಸಿರುತ್ತಾನೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ. ಮೇಲ್ಕಂಡ ಚಹರೆ ಗುರುತುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ಪಿ.ಎಸ್.ಐ ದೂ:08396-220333 ಅಥವಾ ಸಿ.ಪಿ.ಐ ಸಿರುಗುಪ್ಪ ವೃತ್ತ ದೂ:08396-220003, ಸಿರುಗುಪ್ಪ ಉಪ-ವಿಭಾಗ ಡಿ.ಎಸ್.ಪಿ ದೂ:08396-276000, ಬಳ್ಳಾರಿ ಎಸ್.ಪಿ ದೂ:08392-258400 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ