ಶುಕ್ರವಾರ, ಜೂನ್ 27, 2025

ಮುಂಗಾರು ಬೆಳೆ ಸಮೀಕ್ಷೆ: ಮೊಬೈಲ್ ಆಪ್ ಮೂಲಕ ಬೆಳೆಯ ವಿವರ ದಾಖಲಿಸಲು ಅವಕಾಶ

ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಬೆಳೆಗಳ ಮಾಹಿತಿಯನ್ನು ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ಮಾಹಿತಿ ನಮೂದಿಸಲು ಅವಕಾಶವಿದ್ದು, ರೈತರು ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆಯಲ್ಲಿ ಬೆಳೆಯ ವಿವರ ದಾಖಲಿಸಿ, ಬೆಳೆಯ ನಿಖರ ಮಾಹಿತಿ ನಮೂದು ಮಾಡಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ತಿಳಿಸಿದ್ದಾರೆ. ರೈತರು ಬೆಳೆದ ಬೆಳೆಗಳ ಬಗ್ಗೆ ನಿಖರವಾಗಿ ಮಾಹಿತಿ ಪಡೆದುಕೊಳ್ಳಲು ಇ-ಆಡಳಿತ ವತಿಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಬೆಳೆ ಸಮೀಕ್ಷೆ ದತ್ತಾಂಶ ಮಾಹಿತಿಯನ್ನು ಬೆಳೆ ವಿಸ್ತರಣೆ ಎಣಿಕೆ ಕಾರ್ಯದಲ್ಲಿ, ಬೆಳೆ ಕಟಾವು ಪ್ರಯೋಗದಲ್ಲಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ, ಬೆಳೆಹಾನಿ ವರದಿ ಸಿದ್ಧಪಡಿಸಲು, ಬೆಳೆ ವಿಮಾ ಯೋಜನೆ, ಬೆಂಬಲ ಬೆಲೆ ಯೋಜನೆ, ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಿಸಲು, ರಾಷ್ಟಿçÃಯ ಹಾಗೂ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಮಂಜೂರು ಮಾಡಲು ಬೆಳೆ ಸಮೀಕ್ಷೆ ಮಾಹಿತಿಯನ್ನು ಉಪಯೋಗಿಸಲಾಗುತ್ತದೆ. *ಮೊಬೈಲ್ ಅಪ್ಲಿಕೇಷನ್ ಪಡೆಯಲು ಅನುಸರಿಸಬೇಕಾದ ಅಂಶ:* ರೈತರು ತಮ್ಮ ಮೊಬೈಲ್‌ನಲ್ಲಿ ಗೂಗಲ್ ಪ್ಲೇ-ಸ್ಟೋರ್‌ನಿಂದ ಬೆಳೆ ಸಮೀಕ್ಷೆ ಹಿಂಗಾರು ಹಂಗಾಮಿನ “ಫಾರ್ಮರ್ ಆಪ್ ಕ್ರಾಪ್ ಸರ್ವೇ ಖಾರೀಫ್ 2025” (ಈಚಿಡಿmeಡಿ ಂಠಿಠಿ ಅಡಿoಠಿ Suಡಿveಥಿ ಏhಚಿಡಿiಜಿ 2025) ಆಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ 357904 ಬೆಳೆ ತಾಕುಗಳಿದ್ದು, ಆ ತಾಕುಗಳಿಗೆ ರೈತರು ತಮ್ಮ ಬೆಳೆಗಳ ಮಾಹಿತಿಯನ್ನು ಸ್ವಯಂ ದಾಖಲಿಸಬೇಕು. ಮೊಬೈಲ್ ಆಪ್‌ನಲ್ಲಿ ಜಿಯೋ ರೆಫೆರೆನ್ಸ್ಡ್ ಅಂಡ್ ಡಿಜಿಟೈಜ್‌ಡ್ (ಉeo ಖeಜಿeಡಿeಟಿಛಿeಜ ಚಿಟಿಜ ಆigiಣizeಜ) ಬೆಳೆ ಗ್ರಾಮ ನಕಾಶೆ ಅಳವಡಿಸಲಾಗಿರುವುದರಿಂದ ಆಯಾ ತಾಕಿನ ಗಡಿ ರೇಖೆಯೊಳಗೆ ಹೋಗಿ ಜಿಪಿಎಸ್ ನಿಖರತೆ ಪಡೆದು ಛಾಯಾಚಿತ್ರದೊಂದಿಗೆ ರೈತರು ಬೆಳೆಯ ವಿವರಗಳನ್ನು ಕಡ್ಡಾಯವಾಗಿ ದಾಖಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೃಷಿ, ತೋಟಗಾರಿಕೆ, ಪಿ.ಆರ್ ಅಥವಾ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ