ಶುಕ್ರವಾರ, ಜೂನ್ 20, 2025

ರಸ್ತೆ ಸೇತುವೆ ಕಾಮಗಾರಿ; ಬದಲಿ ಮಾರ್ಗಗಳಲ್ಲಿ ಸಂಚರಿಸುವAತೆ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ

ಬಳ್ಳಾರಿ,ಜೂ.20(ಕರ್ನಾಟಕ ವಾರ್ತೆ): ನಗರದ ಹವಂಭಾವಿಯ ಹತ್ತಿರದ ರಾಷ್ಟಿçÃಯ ಹೆದ್ದಾರಿ-150 ಎ ರಸ್ತೆಯ ತುಂಗಭದ್ರ ಬಲದಂಡೆ ಮೇಲ್ಮಟ್ಟದ ವಿತರಣಾ ಕಾಲುವೆ ಸಂಖ್ಯೆ-14 ಕಿ.ಮೀ 4.40 ರಲ್ಲಿ ಕಾಲುವೆಯ ತುರ್ತು ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಜೂ.20 ರಿಂದ 24 ರವರೆಗೆ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕು ಎಂದು ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ಈ ಸೇತುವೆಯ ಒಂದು ಭಾಗದ ಗೋಡೆ ದುಸ್ಥಿತಿಯಲ್ಲಿದ್ದು, ಮುಂದೆ ಆಗಬಹುದಾದ ಅನಾಹುತ ತಪ್ಪಿಸಲು ಮತ್ತು ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸುವ ಮುಂಚಿತವಾಗಿ ಸೇತುವೆ ಕಾಮಗಾರಿ ಕೈಗೊಳ್ಳುವುದು ಅವಶ್ಯವೆಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಂ.06 ಕಾಲುವೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಈ ಕುರಿತು ವರದಿ ಸಲ್ಲಿಸಿರುತ್ತಾರೆ. ಹಾಗಾಗಿ, ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಹಿತದೃಷ್ಠಿಯಿಂದ ಮೋಟಾರ್ ವಾಹನ ಕಾಯ್ದೆ 1988 ರ ಅಧಿನಿಯಮ 115 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಗಳು 1989 ರ ನಿಯಮ 221 ಎ (5) ರನ್ವಯ ಪ್ರದತ್ತವಾದ ಅಧಿಕಾರದಡಿ ಜೂ.20 ರಿಂದ 24 ರವರೆಗೆ ಬದಲಿ ಮಾರ್ಗದಲ್ಲಿ ಸಂಚರಿಸುವAತೆ ಆದೇಶದಲ್ಲಿ ತಿಳಿಸಿದ್ದಾರೆ. *ಬದಲಿ ಮಾರ್ಗ:* ಬಳ್ಳಾರಿಯಿಂದ ಸಿರುಗುಪ್ಪ ಕಡೆಗೆ ಹೋಗುವ ಲಘು ಮತ್ತು ಬಾರಿ ವಾಹನಗಳು ಕಾಮಗಾರಿ ಹತ್ತಿರದ ಕಾಲುವೆಯ ಎಡಭಾಗದ ಸರ್ವೀಸ್ ರಸ್ತೆಯಿಂದ 100 ಮೀ. ಅಂತರದ ಸೇತುವೆ ಮೂಲಕ ಬಲಕ್ಕೆ ತಿರುವು ಪಡೆದುಕೊಂಡು ಸಿರುಗುಪ್ಪ ರಸ್ತೆಯ ಕಡೆಗೆ ಸಂಚಾರ ಮಾಡಬೇಕು. ಸಿರುಗುಪ್ಪದಿಂದ ಬಳ್ಳಾರಿ ನಗರಕ್ಕೆ ಪ್ರವೇಶಿಸುವ ಭಾರಿ ವಾಹನಗಳು ಹವಂಭಾವಿ ಹೆಚ್‌ಎಲ್‌ಸಿ ವಿತರಣಾ ಕಾಲುವೆಯ ಸೇವಾ ರಸ್ತೆ(ಸಿಸಿ ರಸ್ತೆ) ಮೂಲಕ ತಾಳೂರು ರಸ್ತೆಯ ಮೂಲಕ ಸಂಚರಿಸಬೇಕು. ಸಿರುಗುಪ್ಪದಿAದ ಬಳ್ಳಾರಿ ನಗರಕ್ಕೆ ಬರುವ ಲಘು ವಾಹನಗಳು ಹವಂಭಾವಿ ಹೆಚ್‌ಎಲ್‌ಸಿ ವಿತರಣಾ ಕಾಲುವೆಯ ಸೇವಾ ರಸ್ತೆ ಕಿ.ಮೀ 5.10 ರಲ್ಲಿನ ಸೇತುವೆ ಮೂಲಕ ಸಂಚಾರ ಮಾಡಬೇಕು ಎಂದು ಜಿಲ್ಲಾಧಿಕಾರಿವರು ತಿಳಿಸಿದ್ದಾರೆ. ಕಾಮಗಾರಿ ನಿರ್ಮಾಣದ ಬಗ್ಗೆ ಹಾಗೂ ಸಾರ್ವಜನಿಕರ ಸುರಕ್ಷತೆ ಬಗ್ಗೆ ಸೂಚನಾ ಫಲಕ ಮತ್ತು ಸಂಚಾರ ಬದಲಾವಣೆ ಮಾರ್ಗ ಅಳವಡಿಸಬೇಕು. ಸಂಬAಧಿಸಿದ ಅಧಿಕಾರಿಗಳು ರಸ್ತೆಯಲ್ಲಿ ಸೂಕ್ತ ಸಂಕೇತಗಳನ್ನು ಹಾಗೂ ಕಾಮಗಾರಿ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳಕಿನ ವ್ಯವಸ್ಥೆ ಅಳವಡಿಸಬೇಕು. ಇತರೆ ಎಲ್ಲಾ ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ