ಸೋಮವಾರ, ಜೂನ್ 23, 2025

ಮೃತ ಅನಾಮಧೇಯ ಮಹಿಳೆ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಜೂ.23(ಕರ್ನಾಟಕ ವಾರ್ತೆ): ನಗರದ ಸ್ಟೇಷನ್ ರಸ್ತೆಯ ಸಕಾರಿ ಬಾಲಕೀಯರ ಶಾಲೆ ಮುಖ್ಯ ಗೇಟ್ ಎದುರುಗಡೆ ಅನಾಮಧೇಯ ಮಹಿಳೆಯು ಸೂಕ್ತ ಆರೈಕೆ ಇಲ್ಲದೇ ಯಾವುದೋ ಖಾಯಿಲೆಯಿಂದ ಜೂ.22 ರಂದು ಮೃತಪಟ್ಟಿದ್ದು, ಮೃತದೇಹವನ್ನು ಬಿಎಂಸಿಆರ್‌ಸಿ ಯ ಶೀತಲೀಕೃತ ಶವಗಾರ ಕೋಣೆಯಲ್ಲಿರಿಸಿದ್ದು, ಮೃತಳÀ ವಾರಸುದಾರರು ತಿಳಿದಿರುವುದಿಲ್ಲ. ಈ ಕುರಿತು ಬ್ರೂಸ್‌ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತಳ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ಚಹರೆ ಗುರುತು: ಎತ್ತರ 5.4 ಅಡಿ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಗೋದಿ ಮೈಬಣ್ಣ, ಗುಂಗೂರು ಕಪ್ಪು ಕೂದಲು ಇರುತ್ತದೆ. ಪಿಂಕ್ ಬಣ್ಣದ ಬ್ಲೌಜ್ ಮತ್ತು ಸಿಮೆಂಟ್ ಕಲರ್ ಬಣ್ಣಗಳ ಸೀರೆ ಧರಿಸಿರುತ್ತಾಳೆ. ಬಲ ಕಪಾಳಕ್ಕೆ ಒಂದು ಚುಕ್ಕೆ ತರ ಹಚ್ಚೆ ಗುರುತು ಇರುತ್ತದೆ. ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ಮೃತ ಮಹಿಳೆಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100, 258102 ಅಥವಾ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ದೂ.08392-272022, ಪಿ.ಐ ಮೊ.9480803045, ಪಿಎಸ್‌ಐ ಮೊ.9480803081 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ