ಶನಿವಾರ, ಜೂನ್ 21, 2025
ನೆಹರು ಯುವ ಕೇಂದ್ರದಿAದ ಯೋಗ ದಿನಾಚರಣೆ
ಬಳ್ಳಾರಿ,ಜೂ,21(ಕರ್ನಾಟಕ ವಾರ್ತೆ):
ನೆಹರು ಯುವ ಕೇಂದ್ರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ಚಿಗುರು ಕಲಾ ತಂಡ ಇವರುಗಳ ಸಂಯುಕ್ತಾಶ್ರಯದಲ್ಲ್ಲಿ ಸಂಡೂರು ತಾಲ್ಲೂಕಿನ ಹೊಸದರೋಜಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಶನಿವಾರ ಯೋಗಾಭ್ಯಾಸ ಮಾಡಲಾಯಿತು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಮಹೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಯೊಬ್ಬರು ಯೋಗ ಮಾಡುವುದರಿಂದ ಮಾನಸಿಕ ನೆಮ್ಮದಿ ಮತ್ತು ತಾಳ್ಮೆಯಿಂದಿರಲು ಸಾಧ್ಯ ಎಂದು ತಿಳಿಸಿದರು.
ಬಳಿಕ ಚಿಗುರು ಕಲಾತಂಡದ ಹುಲಗಪ್ಪ ಎಸ್.ಎಮ್ ಮತ್ತು ಮೋಹನ್ ಅವರು ವಿವಿಧ ಆಯಾಮಗಳನ್ನು ಮಾಡಿಸಿದರು. ನಂತರ ಶಾಲೆ ಮಕ್ಕಳಿಗೆ ಬೆಳಗಿನ ಉಪಹಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹೊಸ ದರೋಜಿ ಗ್ರಾಮ ಪಂಚಾಯಿತಿಯ ಸಿಬ್ಬಂದಿ, ಶಾಲೆಯ ಎಲ್ಲಾ ಮುಖ್ಯ ಗುರುಗಳು, ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.
---------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ