ಶನಿವಾರ, ಜೂನ್ 21, 2025
ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 7,8,9 ನೇ ತರಗತಿ ಪ್ರವೇಶಕ್ಕೆ ಖಾಲಿ ಸೀಟುಗಳ ಭರ್ತಿ: ಅರ್ಜಿ ಆಹ್ವಾನ
ಬಳ್ಳಾರಿ,ಜೂ.10(ಕರ್ನಾಟಕ ವಾರ್ತೆ):
ನಗರದ ಈದ್ಗಾ ರಸ್ತೆಯ ಹಿರಾಳ್ ಕುಡಂನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಪ್ರಸ್ತಕ ಸಾಲಿಗೆ 7, 8 ಮತ್ತು 9 ನೇ ತರಗತಿಯಲ್ಲಿ ಖಾಲಿಯಿರುವ ಸೀಟ್ ಗಳಿಗಾಗಿ ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮುಖ್ಯಗುರುಗಳು ತಿಳಿಸಿದ್ದಾರೆ.
*ಬೇಕಾದ ದಾಖಲೆ:*
ಅರ್ಜಿ ನಮೂನೆ, ಆಧಾರ್ ಕಾರ್ಡ್, ವಿದ್ಯಾರ್ಥಿಯ 2 ಭಾವಚಿತ್ರ, ಬೇರೆ ತಾಲ್ಲೂಕಿನ ವಿದ್ಯಾರ್ಥಿಗಳಾಗಿದ್ದಲ್ಲಿ ತಹಶೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜೂ.30 ಕೊನೆಯ ದಿನ ಆಗಿದೆ.
7ನೇ ತರಗತಿಯಲ್ಲಿ 4 ಸೀಟ್, 8ನೇ ತರಗತಿಯಲ್ಲಿ 18 ಸೀಟ್ ಮತ್ತು 9ನೇ ತರಗತಿಯಲ್ಲಿ 5 ಸೀಟ್ ಸೇರಿ ಒಟ್ಟು 27 ಸೀಟ್‌ಗಳು ಲಭ್ಯವಿದ್ದು, ಪ್ರವೇಶ ಪರೀಕ್ಷೆಯನ್ನು ಜುಲೈ 08 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಗರದ ಈದ್ಗಾ ರಸ್ತೆಯ ಹೀರಾಳ್‌ಕುಡಂನ ಸರ್ಕಾರಿ ಆದರ್ಶ ವಿದ್ಯಾಲಯ ಅಥವಾ ಮೊ.9740738762 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ