ಸೋಮವಾರ, ಜೂನ್ 16, 2025
ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಜೂ.16(ಕರ್ನಾಟಕ ವಾರ್ತೆ):
ನಗರದ ರೈಲ್ವೇ ವ್ಯಾಪ್ತಿಯ ಬಳ್ಳಾರಿ ಮತ್ತು ಕಂಟೋನ್‌ಮೆAಟ್ ರೈಲು ನಿಲ್ದಾಣದ ಮಧ್ಯೆ ಸುಮಾರು 30 ವಷÀÀðದ ಅನಾಮದೇಯ ವ್ಯಕ್ತಿಯು ಯಾವುದೋ ಕಾರಣದಿಂದ ರೈಲು ಹಳಿಯ ಮೇಲೆ ಅಡ್ಡಲಾಗಿ ಮಲಗಿ ಜೂ.13 ರಂದು ಆತ್ಮಹತ್ಯೆಯಿಂದ ಮೃತಪಟ್ಟಿದ್ದು, ಮೃತನ ವಾರಸುದಾರರು ತಿಳಿದಿರುವುದಿಲ್ಲ. ಈ ಕುರಿತು ಬಳ್ಳಾರಿ ರೈಲ್ವೇ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ರೈಲ್ವೇ ಪೊಲೀಸ್ ತನಿಖಾಧಿಕಾರಿ ಮನವಿ ಮಾಡಿದ್ದಾರೆ.
ಚಹರೆ ಗುರುತು:
ಎತ್ತರ 5.6 ಅಡಿ, ಕೋಲು ಮುಖ, ಗೋದಿ ಮೈಬಣ್ಣ, ತೆಳ್ಳನೆ ಮೈಕಟ್ಟು ಹೊಂದಿದ್ದು, ಮೃತನ ತಲೆಯಲ್ಲಿ 02 ಇಂಚು ಕಪ್ಪು ಕೂದಲು ಮತ್ತು ಮುಖದಲ್ಲಿ 01 ಇಂಚು ಗಡ್ಡ, ಮೀಸೆ ಇರುತ್ತದೆ. ಬಲಗೈ ಮೊಣಕೈ ಮುಂದೆ ಆಂಗ್ಲ ಬಾಷೆಯಲ್ಲಿ ಗೌತಮ್ ಮತ್ತು ಓಂ ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾನೆ.
ಮೃತನ ದೇಹದ ಮೇಲೆ ಕಪ್ಪು ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಮ್ಯಾಚೋ ಕಂಪನಿಯ ನಶಿ ಬಣ್ಣದ ಅಂಡರವೇರ್ ಇರುತ್ತದೆ.
ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆ ದೂ. 08392-276063 ಅಥವಾ ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ ದೂ. 080-22871291 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ