ಬುಧವಾರ, ಜೂನ್ 11, 2025

ನಾಗರಿಕ ರಕ್ಷಣಾ ಸ್ವಯಂ ಸೇವಕರಾಗಿ ಮಾಜಿ ಸೈನಿಕರಿಂದ ನೋಂದಣಿಗೆ ಆಹ್ವಾನ

ಬಳ್ಳಾರಿ,ಜೂ.11(ಕರ್ನಾಟಕ ವಾರ್ತೆ): ನಾಗರಿಕ ರಕ್ಷಣಾ ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಲು ಮಾಜಿ ಸೈನಿಕರಿಂದ ನೋಂದಣಿಗೆ ಆಹ್ವಾನಿಸಲಾಗಿದೆ ಎಂದು ಧಾರವಾಡದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಣೆಯಲ್ಲಿ ತಿಳಿಸಿದ್ದಾರೆ. ನಾಗರಿಕ ರಕ್ಷಣಾ ವ್ಯವಸ್ಥೆಯು ಸ್ವಯಂಸೇವಾ ಮಾದರಿಯಾಗಿದ್ದು, ಇತ್ತೀಚೆಗೆ ಭಾರತದ 400 ಜಿಲ್ಲೆಗಳಲ್ಲಿ ರಾಷ್ಟçವ್ಯಾಪಿ ನಾಗರಿಕ ರಕ್ಷಣಾ ಅಣಕು ಕವಾಯತು ನಡೆಸಲಾಗಿತ್ತು. ಪ್ರಸ್ತುತ ಭಾರತದ 244 ವಿವಿದ ಜಿಲ್ಲೆಗಳಲ್ಲಿ ಈ ವ್ಯವಸ್ಥೆಯು ಅಸ್ತಿತ್ವದಲ್ಲಿದ್ದು, ಯುದ್ಧ ಹಾಗೂ ಶಾಂತಿಯ ಸಂದರ್ಭದಲ್ಲಿ ಇದರ ಜವಾಬ್ದಾರಿ ನಿರ್ದಿಷ್ಠಪಡಿಸಲಾಗಿದೆ. ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಧಾರವಾಡ ದ ವ್ಯಾಪ್ತಿಯಲ್ಲಿರುವ ಧಾರವಾಡ, ಗದಗ, ಹಾವೇರಿ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿರುವ ಮಾಜಿ ಸೈನಿಕರು (Non Reserve List) ಸ್ವಯಂಪ್ರೇರಿತವಾಗಿ ನಾಗರಿಕ ರಕ್ಷಣಾ ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಾಯಿಸಿಕೊಳ್ಳಲು ಆನ್‌ಲೈನ್ ವೆಬ್‌ಸೈಟ್ www.civildefencewarriors.gov.in ಗೆ ಭೇಟಿ ನೀಡಬಹುದು. ಮಾಜಿ ಸೈನಿಕರು ನೋಂದಣಿಯ ಮಾಹಿತಿಯನ್ನು ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಧಾರವಾಡ, ಇವರ ಇ-ಮೇಲ್ sainikwelfaredwd@gmail.com ಅಥವಾ ದೂ.08362440176 ಗೆ ಸಂಪರ್ಕಿಸಿ ಮಾಹಿತಿ ನೀಡಬಹುದು. ---------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ