ಗುರುವಾರ, ಆಗಸ್ಟ್ 21, 2025
ಗೌರಿ ಗಣೇಶ ಹಬ್ಬದ ಪ್ರಯುಕ್ತ ಶೇ.15 ರಿಯಾಯಿತಿ ದರದಲ್ಲಿ ಲಿಡ್‌ಕರ್ ನ ಚರ್ಮವಸ್ತುಗಳು ಮಾರಾಟ
ಬಳ್ಳಾರಿ,ಆ.21(ಕರ್ನಾಟಕ ವಾರ್ತೆ):
ಡಾ.ಬಾಬು ಜಗನ್ ಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಲಿಡ್‌ಕರ್ ನ ಎಲ್ಲಾ ಚರ್ಮವಸ್ತುಗಳಿಗೆ ಶೇ.15 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಲಿಡ್‌ಕರ್ ನ ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.
ವಿಳಾಸ: ನಗರದ ಹೆಚ್.ಆರ್.ಗವಿಯಪ್ಪ ವೃತ್ತದ ಬಳಿಯ ಬುಡಾ ಕಾಂಪ್ಲೆಕ್ಸ್ ನ ಲಿಡ್‌ಕರ್ ಲೆದರ್ ಎಂಪೋರಿಯಮ್ ಶಾಪ್ ನಂ:24 ರಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಆಗಸ್ಟ್ 19 ರಿಂದ 26 ರವರೆಗೆ (8 ದಿನ ಮಾತ್ರ) ರಿಯಾಯಿತಿ ದರ ನೀಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ದೂ.08392-271741, ಮೊ.9844667691 ಗೆ ಸಂಪರ್ಕಿಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ