ಸೋಮವಾರ, ಆಗಸ್ಟ್ 18, 2025
ಮೆಟ್ರಿ: ಆ.21 ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ,ಆ.18(ಕರ್ನಾಟಕ ವಾರ್ತೆ):
ಕಂಪ್ಲಿ ಜೆಸ್ಕಾಂ ವ್ಯಾಪ್ತಿಯ ಮೆಟ್ರಿ 110/11ಕೆವಿ ಉಪ ಕೇಂದ್ರದಲ್ಲಿ ವಿದ್ಯುತ್ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿAದ ಆ.21 ಬೆಳಿಗ್ಗೆ 09 ರಿಂದ ಸಂಜೆ 04 ಗಂಟೆಯವರೆಗೆ ಮೆಟ್ರಿ ಉಪಕೇಂದ್ರದ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಮೆಟ್ರಿ ಉಪಕೇಂದ್ರದ ವ್ಯಾಪ್ತಿಯ ಗ್ರಾಮಗಳ ನಿರಂತರ ಜ್ಯೋತಿ ಮಾರ್ಗಗಳಾದ ಎಫ್2-ಗೋನಾಳ್ ಮತ್ತು ಎಫ್4-ಮೆಟ್ರಿ ವ್ಯಾಪ್ತಿಯಲ್ಲಿ ಬೆಳಿಗ್ಗೆ 09 ರಿಂದ ಸಂಜೆ 04 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಪಂಪ್ ಸೆಟ್ ವಿದ್ಯುತ್ ಮಾರ್ಗಗಳಾದ ಎಫ್1-ಮಾವಿನಹಳ್ಳಿ, ಎಫ್3-ಜೌಕು, ಎಫ್5-ದೇವಲಾಪುರ ಮತ್ತು ಎಫ್6-ಉಪ್ಪಾರಹಳ್ಳಿ ಮಾರ್ಗಗಳು.
ಮೆಟ್ರಿಗೆ ಸಂಬAಧಿಸಿದ ಪಂಪ್ ಸೆಟ್(ಐಪಿ ಸೆಟ್) ಮೇಲೆ ತಿಳಿಸಿದ ಮಾರ್ಗಗಳಲ್ಲಿ ಅಂದು ಬೆಳಿಗ್ಗೆ 4 ರಿಂದ 9ರವರೆಗೆ(5ತಾಸು) ಉಳಿದ 2ತಾಸು ಸಂಜೆ ವಿದ್ಯುತ್ ಸರಬರಾಜು ಮಾಡಲಾಗುವುದು.
ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕಾರ್ಯ ಪೂರ್ವಾನುಮತಿ ಇಲ್ಲದೇ ಮಾಡಬಾರದು. ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದ್ದಲ್ಲಿ ಜೆಸ್ಕಾಂ ಕಂಪನಿ ಜವಾಬ್ದಾರಿಯಾಗಿರುವುದಿಲ್ಲ. ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ