ಮಂಗಳವಾರ, ಆಗಸ್ಟ್ 26, 2025
ಆ.30 ರಂದು ಜಿಲ್ಲಾ ಮಟ್ಟದ ಶಿಶಿಕ್ಷÄ ಮೇಳ
ಬಳ್ಳಾರಿ,ಆ.26(ಕರ್ನಾಟಕ ವಾರ್ತೆ):
ಜಿಲ್ಲೆಯ ಸ್ಥಳೀಯ ಉದ್ದಿಮೆದಾರರಿಂದ ನಗರದ ರೇಡಿಯೋ ಪಾರ್ಕ್ ಪ್ರದೇಶದ ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಆಗಸ್ಟ್ 30 ರಂದು ಬೆಳಿಗ್ಗೆ 10.30 ಕ್ಕೆ ಜಿಲ್ಲಾ ಮಟ್ಟದ ಶಿಶಿಕ್ಷÄ ಮೇಳ(ಅಪ್ರೆಂಟಿಸ್‌ಶಿಪ್) ಹಮ್ಮಿಕೊಳ್ಳಲಾಗಿದೆ.
ಈ ಮೇಳದಲ್ಲಿ ವಿವಿಧ ಕೈಗಾರಿಕಾ ಸಂಸ್ಥೆಗಳ (ಐಟಿಐ ಕಾಲೇಜ್) ಫಿಟ್ಟರ್, ಎಲೆಕ್ಟಿçಷಿಯನ್, ಟರ್ನರ್, ಮೆಷಿನಿಸ್ಟ್, ವೆಲ್ಡರ್, ಇಎಂ, ಎಂಎAವಿ, ಡಿಸೇಲ್ ಮೆಕ್ಯಾನಿಕ್, ಕೊಪ, ಎಂಇವಿ ಮತ್ತು ವಿವಿಧ ವೃತ್ತಿಗಳ ತರಬೇತುದಾರರು ಅಂತಿಮ ವರ್ಷದ ಹಾಗೂ ಈಗಾಗಲೇ ತೇರ್ಗಡೆಯಾದ ತರಬೇತಿದಾರರು ಅಪ್ರೆಂಟಿಸ್‌ಶಿಪ್ ಮೇಳದಲ್ಲಿ ಪಾಲ್ಗೊಳ್ಳಬಹುದು.
ಬೇಕಾದ ದಾಖಲೆ: 18 ವರ್ಷ ಪೂರೈಸಿರಬೇಕು. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, 2 ಭಾವಚಿತ್ರ, ಆಧಾರ್ ಕಾರ್ಡ್, ಸ್ವ-ವಿವರವುಳ್ಳ (ಬಯೋಡಾಟ) ದೊಂದಿಗೆ ಹಾಜರಾಗಬಹುದು.
ಅರ್ಹರು ಭಾಗವಹಿಸಿ ಈ ಅಪ್ರೆಂಟಿಶಿಪ್ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೆ.ಹೆಚ್.ಎಂ ಪಂಡಿತಾರಾಧ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ