ಮಂಗಳವಾರ, ಆಗಸ್ಟ್ 19, 2025

ಕುರುಗೋಡು: ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್ ಭೇಟಿ

ಬಳ್ಳಾರಿ,ಆ.19(ಕರ್ನಾಟಕ ವಾರ್ತೆ): ನಿರಂತರ ಮಳೆಯ ಅವಾಂತರಗಳಿAದ ಮುಂಜಾಗರೂಕತೆ ಕ್ರಮವಾಗಿ ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್ ಅವರು ಮಂಗಳವಾರ ಕುರುಗೋಡು ಪಟ್ಟಣದ ಸರ್ಕಾರಿ ಹಿರಿಯ ಫ್ರೌಡ ಶಾಲೆಗೆ ಭೇಟಿ ನೀಡಿ ಕೊಠಡಿಗಳ ದುರಸ್ಥಿ ಕುರಿತು ಪರಿಶೀಲಿಸಿದರು. ಬಳಿಕ ಪಟ್ಟಣದ ಹರಿಪ್ರಿಯಾ ಕಾಲೋನಿಯಲ್ಲಿರುವ 13 ನೇ ಕೇಂದ್ರ ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ಅಲ್ಲಿನ ಸ್ಥಿತಿ-ಗತಿ ವೀಕ್ಷಿಸಿದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಕಡಿಮೆಯಾಗಿರುವುದರ ಕುರಿತು ಬಿಇಒಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಿದರು. ಪಟ್ಟಣದ ಶಾಲಾ ಶೌಚಾಲಯಗಳ ಸೂಕ್ತ ನಿರ್ವಹಣೆ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು. ಈ ವೇಳೆ ಕುರುಗೋಡು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ನಿರ್ಮಲ, ಕುರುಗೋಡು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗ ಮೂರ್ತಿ ಸೇರಿದಂತೆ ಮುಖ್ಯ ಗುರುಗಳು, ಶಾಲಾ ಸಹ ಶಿಕ್ಷಕರು ಹಾಜರಿದ್ದರು. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ