ಮಂಗಳವಾರ, ಆಗಸ್ಟ್ 19, 2025

ಆ.21 ರಂದು ಏಡ್ಸ್, ಎಸ್‌ಟಿಡಿ ಜಾಗೃತಿ ಕುರಿತು ಬೈಕ್ ರ‍್ಯಾಲಿ

ಬಳ್ಳಾರಿ,ಆ.19(ಕರ್ನಾಟಕ ವಾರ್ತೆ): ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕ ವತಿಯಿಂದ ಐಇಸಿ ಯ ಬಗ್ಗೆ ಹೆಚ್ಚಿನ ಪ್ರಚಾರ ಮಾಡುವ ಪ್ರಯುಕ್ತ ಹೆಚ್‌ಐವಿ/ಏಡ್ಸ್ ಮತ್ತು ಎಸ್.ಟಿ.ಡಿ ಜಾಗೃತಿ ಕುರಿತು ಆ.21 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕೋಟೆ ಪ್ರದೇಶದ ಶ್ರೀಮೇಧಾ ಮಹಾವಿದ್ಯಾಲಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೂಲಕ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಬೈಕ್ ರ‍್ಯಾಲಿಯು ಶ್ರೀಮೇಧಾ ಕಾಲೇಜಿನಿಂದ ಆರಂಭವಾಗಿ ಎಸ್.ಪಿ ವೃತ್ತ-ಕುಮಾರಸ್ವಾಮಿ ದೇವಸ್ಥಾನ-ಸುಧಾ ಕ್ರಾಸ್-ಹೆಚ್.ಆರ್.ಗವಿಯಪ್ಪ ವೃತ್ತದ ಮೂಲಕ ಶ್ರೀ ಮೇಧಾ ಕಾಲೇಜು ಆವರಣದವರೆಗೆ ನಡೆಯಲಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕಾಧಿಕಾರಿಗಳು ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ