ಶನಿವಾರ, ಆಗಸ್ಟ್ 16, 2025

ಸಾಮಾನ್ಯ ಸದಸ್ಯರ ನೋಂದಣಿ

ಬಳ್ಳಾರಿ,ಆ.16(ಕರ್ನಾಟಕ ವಾರ್ತೆ): ನಗರದ ಕೌಲ್ ಬಜಾರ್ ನ ವಕ್ಫ್ ಸಂಸ್ಥೆಯಾದ ಯಾಸಿನ್ ಸಾಬ್ ಮಸೀದಿಯ ಸಾಮಾನ್ಯ ಸದಸ್ಯರ ನೋಂದಣಿಯು ಆಗಸ್ಟ್ 18 ರಿಂದ ಸೆಪ್ಟಂಬರ್ 06 ರವರೆಗೆ ನಡೆಯಲಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ತಿಳಿಸಿದ್ದಾರೆ. ಆಗಸ್ಟ್ 18 ರಿಂದ ಸೆಪ್ಟಂಬರ್ 06 ರವರೆಗೆ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 02.30 ರ ಅವಧಿಯಲ್ಲಿ ಸದಸ್ಯರ ದಾಖಲಾತಿಗಾಗಿ ಅರ್ಜಿ ನಮೂನೆ ವಿತರಣೆ ಮಾಡಲಾಗುತ್ತದೆ. ಭರ್ತಿ ಮಾಡಿದ ಅರ್ಜಿ ನಮೂನೆಗಳೊಂದಿಗೆ 3 ಇತ್ತೀಚಿನ ಭಾವಚಿತ್ರ, ರೂ.100 ಶುಲ್ಕ ಹಾಗೂ ಅಧಿಕೃತ ವಿಳಾಸದ 02 ಗುರುತಿನ ಚೀಟಿಗಳೊಂದಿಗೆ ಸೆಪ್ಟಂಬರ್ 06 ಮಧ್ಯಾಹ್ನ 02.30 ರೊಳಗೆ ಜಿಲ್ಲಾ ವಕ್ಫ್ ಕಚೇರಿಯ ನೋಂದಣಿ ಅಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ದಾಖಲಾದ ಸದಸ್ಯರ ಕರಡು ಪಟ್ಟಿಯನ್ನು ಸೆಪ್ಟಂಬರ್ 11 ರಂದು ಪ್ರಕಟಿಸಲಾಗುತ್ತದೆ. ಕರಡು ಪಟ್ಟಿಗೆ ಸಂಬAಧಿಸಿದAತೆ ಆಕ್ಷೇಪಣೆಗಳು ಹಾಗೂ ಸಲಹೆ-ಸೂಚನೆಗಳಿದ್ದಲ್ಲಿ ಸೆಪ್ಟಂಬರ್ 12 ರಿಂದ ಸೆಪ್ಟಂಬರ್ 16 ರೊಳಗೆ ಬೆಳಿಗ್ಗೆ 11 ರಿಂದ ಸಂಜೆ 5.30 ರೊಳಗೆ ಸಲ್ಲಿಸಬಹುದು. ಆಕ್ಷೇಪಣೆಗಳ ವಿಚಾರಣೆಯು ಸೆಪ್ಟಂಬರ್ 17 ರಂದು ಬೆಳಿಗ್ಗೆ 11 ರಿಂದ ನಡೆಸಲಾಗುತ್ತದೆ. ದಾಖಲಾದ ಸಾಮಾನ್ಯ ಸದಸ್ಯರ ಅಂತಿಮ ಪಟ್ಟಿಯನ್ನು ಸೆಪ್ಟಂಬರ್ 22 ರಂದು ಮಧ್ಯಾಹ್ನ 3.30 ಕ್ಕೆ ಯಾಸೀನ್ ಸಾಬ್ ಮಸೀದಿ ಮತ್ತು ಜಿಲ್ಲಾ ವಕ್ಫ್ ಕಚೇರಿಯಲ್ಲಿ ಪ್ರಕಟಿಸಲಾಗುವುದು. ಈಗಾಗಲೇ 2018ರಲ್ಲಿ ಅರ್ಜಿಗಳನ್ನು ಸಲ್ಲಿಸಿದ ಅರ್ಭ್ಯಥಿಗಳು ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಸೆ.11 ರಂದು ಪ್ರಕಟಿಸಲಾಗುತ್ತಿರುವ ಕರಡು ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸದಲ್ಲಿ ಬದಲಾವಣೆ ಇದ್ದಲ್ಲಿ ಸೂಕ್ತ ದಾಖಲೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ