ಸೋಮವಾರ, ಆಗಸ್ಟ್ 18, 2025

ಇಟಗಿ: ಆ.20 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಆ.18(ಕರ್ನಾಟಕ ವಾರ್ತೆ): ಕಂಪ್ಲಿ ಜೆಸ್ಕಾಂ ವ್ಯಾಪ್ತಿಯ ಇಟಗಿ 110/11ಕೆವಿ ಉಪ ಕೇಂದ್ರದಲ್ಲಿ ವಿದ್ಯುತ್ ನಿರ್ವಹಣೆ ಕಾರ್ಯ ಕೈಗೊಳುತ್ತಿರುವುದರಿಂದ ಆ.20 ರಂದು ಬೆಳಿಗ್ಗೆ 09 ರಿಂದ ಸಂಜೆ 04 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಇಟಗಿ ಉಪ ಕೇಂದ್ರದ ವ್ಯಾಪ್ತಿಗೆ ಬರುವ ಸಣಾಪುರ, ಬೆಳಗೋಡುಹಾಳು, ನಂ.2 ಮುದ್ದಾಪುರ, ಅರಳಹಳ್ಳಿ, ಮಾರೆಮ್ಮ ಕ್ಯಾಂಪ್, ಬಸವೇಶ್ವರ ಕ್ಯಾಂಪ್, ಇಟಗಿ ಗ್ರಾಮಗಳ ನಿರಂತರ ಜ್ಯೋತಿ. ಎಫ್4-ಅರಳಹಳ್ಳಿ ಮತ್ತು ಎಫ್3-ಎಚ್‌ಟಿ ಮಾರ್ಗಗಳು, ನೀರಾವರಿ ವಿದ್ಯುತ್ ಮಾರ್ಗಗಳಿಗೆ ಸಂಬAಧಿಸಿದAತೆ ಎಫ್1-ಇಟಗಿ, ಎಫ್2-ತುಂಗಭದ್ರ, ಎಫ್7-ಮಣ್ಣೂರು ಕ್ಯಾಂಪ್ ಮತ್ತು ಎಫ್11-ಮುದ್ದಾಪುರ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಇಟಗಿ ಉಪಕೇಂದ್ರಕ್ಕೆ ಸಂಬAಧಿಸಿದ ಪಂಪ್ ಸೆಟ್(ಐಪಿ ಸೆಟ್) ಮೇಲೆ ತಿಳಿಸಿದ ಮಾರ್ಗಗಳಲ್ಲಿ ಅಂದು ಬೆಳಿಗ್ಗೆ 4 ರಿಂದ 9ವರೆಗೆ (5ತಾಸು) ಉಳಿದ 2 ತಾಸು ಸಂಜೆ ವಿದ್ಯುತ್ ಸರಬರಾಜು ಮಾಡಲಾಗುವುದು. ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕಾರ್ಯ ಪೂರ್ವಾನುಮತಿ ಇಲ್ಲದೇ ಮಾಡಬಾರದು. ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದ್ದಲ್ಲಿ ಜೆಸ್ಕಾಂ ಕಂಪನಿ ಜವಾಬ್ದಾರಿಯಾಗಿರುವುದಿಲ್ಲ. ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ