ಸೋಮವಾರ, ಆಗಸ್ಟ್ 25, 2025

ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಆ.25(ಕರ್ನಾಟಕ ವಾರ್ತೆ): ಬಳ್ಳಾರಿ ರೈಲ್ವೇ ನಿಲ್ದಾಣದ ಹೊಸಪೇಟೆ ಮತ್ತು ವ್ಯಾಸನಕೇರಿ ರೈಲು ನಿಲ್ದಾಣಗಳ ಮಧ್ಯದ ರೈಲ್ವೇ ಕಿ.ಮೀ ನಂ.10/400 ರ ರೈಲು ಹಳಿಯಲ್ಲಿ ಚಲಿಸುವ ರೈಲು ಗಾಡಿ ಸಂ.07396 ಗೆ ಸುಮಾರು 55 ವರ್ಷದ ಅನಾಮಧೇಯ ವ್ಯಕ್ತಿಯು ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಅಡ್ಡಲಾಗಿ ಬಂದು ಆ.21 ರಂದು ಮೃತಪಟ್ಟಿದ್ದು, ಮೃತನ ವಾರಸುದಾರರ ಬಗ್ಗೆ ಮಾಹಿತಿ ಇರುವುದಿಲ್ಲ. ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ. ಚಹರೆ: ಸುಮಾರು ಎತ್ತರ 5.6 ಅಡಿ, ಸದೃಢ ದೇಹ, ಸಾಧಾರಣ ಕಪ್ಪು ಮೈ ಬಣ್ಣ, ದುಂಡು ಮುಖ, ಅಗಲವಾದ ಕಿವಿ, ದಪ್ಪ ಮೂಗು, ತಲೆಯ ನೆತ್ತಿಯ ಮೇಲೆ ಕೂದಲು ಇರುವುದಿಲ್ಲ. ಕಪ್ಪು ಮಿಶ್ರಿತ ಬಿಳಿ ಕೂದಲು, ಸಣ್ಣ ಗಡ್ಡ ಮೀಸೆ ಬಿಟ್ಟಿರುತ್ತಾನೆ. ಮೃತನ ಮೈ ಮೇಲಿನ ಬಟ್ಟೆ: ಬಿಳಿ ಗೆರೆಗಳುಳ್ಳ ನೀಲಿ ಬಣ್ಣದ ತುಂಬು ತೋಳಿನ ಅಂಗಿ, ಬಿಳಿ ಬಣ್ಣದ ಟೀ-ಶರ್ಟ್, ನೀಲಿ ಬಣ್ಣದ ಪ್ಯಾಂಟ್, ಪಾಚಿ ಬಣ್ಣದ ಒಳಉಡುಪು, ಪಾಚಿ ಬಣ್ಣದ ಚಪ್ಪಲಿ ಧರಿಸಿರುತ್ತಾನೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ದೂ.08392-276063, ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ.080-22871291 ಗೆ ಸಂಪರ್ಕಿಸಬಹುದು ಎಂದು ಕೋರಿದೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ