ಬುಧವಾರ, ಆಗಸ್ಟ್ 20, 2025

ವ್ಯಕ್ತಿ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ಆ.20(ಕರ್ನಾಟಕ ವಾರ್ತೆ): ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು ಗ್ರಾಮದ 4ನೇ ವಾರ್ಡ್ನ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಹತ್ತಿರದ ನಿವಾಸಿಯಾದ ಸಿಂಧವಾಳ ವೆಂಕಟೇಶ್ ಎನ್ನುವ 72 ವರ್ಷದ ವ್ಯಕ್ತಿಯು ಆ.06 ರಂದು ಕಾಣೆಯಾಗಿರುವ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ಚಹರೆ: ಅಂದಾಜು 5.9 ಅಡಿ ಎತ್ತರ, ಕೋಲು ಮುಖ, ಕಪ್ಪು ಮೈಬಣ್ಣ, ತೆಳ್ಳನೇಯ ಮೈಕಟ್ಟು ಹೊಂದಿದ್ದು, ಬಿಳಿ ಕೂದಲು ಮತ್ತು ಬಲಗಣ್ಣು ಸ್ವಲ್ಪ ಮುಚ್ಚಿರುತ್ತದೆ. ಎದೆಯ ಬಲಭಾಗದಲ್ಲಿ ಕಪ್ಪು ಮಚ್ಚೆ, ಬಲಗಾಲು ತೊಡೆಯ ಭಾಗದಲ್ಲಿ ಹಳೇ ಗಾಯದ ಗುರುತು ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಗೆರೆಗಳಿರುವ ಬಿಳಿ ಬಣ್ಣದ ತುಂಬುತೋಳಿನ ಅಂಗಿ ಮತ್ತು ಬಿಳಿ ಬಣ್ಣದ ಪಂಚೆ ಧರಿಸಿರುತ್ತಾನೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಮೇಲ್ಕಂಡ ಚಹರೆ ಗುರುತುಗಳುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, ಮೊ.9480803049 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ