ಬುಧವಾರ, ಅಕ್ಟೋಬರ್ 15, 2025

ಕಂಪ್ಲಿ: 5 ಅಡಿ ಎತ್ತರದಲ್ಲಿ ವಿದ್ಯುತ್ ಮಾಪಕ ಅಳವಡಿಸಿಕೊಳ್ಳಲು ಸೂಚನೆ

ಬಳ್ಳಾರಿ,ಅ.15(ಕರ್ನಾಟಕ ವಾರ್ತೆ): ಕಂಪ್ಲಿ ಜೆಸ್ಕಾಂ ವ್ಯಾಪ್ತಿಯಲ್ಲಿ ಕಂಪನಿಯ ನಿಯಮಾನುಸಾರ ಎಲ್ಲಾ ಸ್ಥಾವರದಲ್ಲಿರುವ ಮೀಟರ್‌ಗಳನ್ನು ಆಪ್ಟಿಕಲ್ ಪ್ರೋಬ್ ಡಿವೈಸ್ ಮೂಲಕವೇ ರೀಡಿಂಗ್ ಮಾಡಬೇಕಾಗಿದ್ದು, ವಿದ್ಯುತ್ ಗ್ರಾಹಕರು ತಮ್ಮ ಸ್ಥಾವರದ ವಿದ್ಯುತ್ ಮಾಪಕವನ್ನು ಕಡ್ಡಾಯವಾಗಿ ನೆಲದಿಂದ 5 ಅಡಿ ಎತ್ತರದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯುತ್ ಮಾಪಕಗಳು ಗೋಚರಿಸುವ ಹಾಗೂ ಓದಲು ಅನುಕೂಲವಾಗುವ ಸ್ಥಳದಲ್ಲಿ ಇರಬೇಕು. ಈಗಾಗಲೇ ಮನೆ ಒಳಗೆ ಇರುವ ಮೀಟರ್‌ಗಳನ್ನು ಹೊರಗೆ ಹಾಕಿಸಿಕೊಳ್ಳಬೇಕು. ಮೀಟರ್ ಓದುವವರಿಗೆ ಸ್ಥಳವಿಲ್ಲದಿದ್ದಲ್ಲಿ ಸ್ಥಳ ಒದಗಿಸುವ ಹಾಗೆ ಅಳವಡಿಸಿಕೊಳ್ಳಬೇಕು. ಈ ನಿಯಮ ಪಾಲನೆ ಮಾಡದಿದ್ದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ