ಸೋಮವಾರ, ಅಕ್ಟೋಬರ್ 6, 2025
ಅನಾಮಧೇಯ ಮೃತದೇಹ ಪತ್ತೆ; ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಅ.06(ಕರ್ನಾಟಕ ವಾರ್ತೆ):
ಬಳ್ಳಾರಿ ರೈಲು ನಿಲ್ದಾಣ ವ್ಯಾಪ್ತಿಯ ಹದ್ದಿನಗುಂಡು-ಹಗರಿ ರೈಲ್ವೇ ನಿಲ್ದಾಣಗಳ ಮಧ್ಯ ರೈಲ್ವೇ ಕೆ.ಎಂ.ನA 214/32-34 ನೇದ್ದರ ಹಳಿಯ ಮಧ್ಯೆ ಯಾವುದೋ ಚಲಿಸುವ ರೈಲುಗಾಡಿಗೆ ಆಕಸ್ಮಿಕವಾಗಿ ಬಿದ್ದು ಅಂದಾಜು 50 ವರ್ಷದ ಅನಾಮಧೇಯ ವ್ಯಕ್ತಿಯು ಅ.04 ರಂದು ಮೃತಪಟ್ಟಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರಕಟಣೆ ಹೊರಡಿಸಿದ್ದಾರೆ.
ಮೃತನ ಚಹರೆ: ಎತ್ತರ ಸುಮಾರು 5.6 ಅಡಿ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಉದ್ದ ಮೂಗು, ಅಗಲವಾದ ಹಣೆ, ತಲೆ ಮತ್ತು ಗಡ್ಡ, ಮೀಸೆ ಬೋಳಿಸಿರುತ್ತಾನೆ.
ಮುಂಗೈ ಮೇಲೆ ಎಸ್.ಪಿ.ಎಸ್.ಎಸ್.ಆರ್.ಎಸ್ ಎಂದು ಅಚ್ಚೆ ಗುರುತು ಇರುತ್ತದೆ. ಮೃತನ ಮೈಮೇಲೆ ಗೋಲ್ಡನ್ ಕಲರ್ ತುಂಬುತೋಳಿನ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಇರುತ್ತದೆ.
ಮೇಲ್ಕಂಡ ಚಹರೆ ಗುರುತುಳ್ಳ ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರ ಮೊ:9480802131 ಅಥವಾ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕರ ಮೊ:9480800471 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ