ಶುಕ್ರವಾರ, ಅಕ್ಟೋಬರ್ 3, 2025

ವ್ಯಕ್ತಿ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ಅ.03(ಕರ್ನಾಟಕ ವಾರ್ತೆ): ತಾಲ್ಲೂಕಿನ ಕಾರೆಕಲ್ಲು ಗ್ರಾಮದ ಬಸವಣ್ಣ ಗುಡಿ ಹತ್ತಿರದ 01 ನೇ ವಾರ್ಡ್ ನ ನಿವಾಸಿ ವೀರೆಶ್.ಎ ಎನ್ನುವ 24 ವರ್ಷದ ವ್ಯಕ್ತಿ ಬಸಾಯಿ ಸ್ಟೀಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಸೆ.21 ರಂದು ಕಾಣೆಯಾಗಿರುವ ಕುರಿತು ಪಿ.ಡಿ.ಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಎಂದು ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ಕಾಣೆಯಾದ ವ್ಯಕ್ತಿಯ ಚಹರೆ: ಎತ್ತರ 5.5 ಅಡಿ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ತುಂಬು ತೋಳಿನ ಅಂಗಿ ಮತ್ತು ಕ್ರೀಂ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪಿ.ಡಿ ಹಳ್ಳಿ ಪೋಲಿಸ್ ಠಾಣೆಯ ದೂ.08392-295010, ಪಿಎಸ್‌ಐ ಮೊ.9480803052, ಪಿಐ ಮೊ.9480803047, ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100, ಎಸ್‌ಪಿ ಕಚೇರಿ ದೂ.08392-258400, ಸಿರುಗುಪ್ಪ ಡಿಎಸ್‌ಪಿ ಕಚೇರಿ ದೂ.08392-27600 ಅಥವಾ ಪಿ.ಡಿ ಹಳ್ಳಿ ವೃತ್ತದ ಸಿಪಿಐ ದೂ.08392-276461 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ