ಶುಕ್ರವಾರ, ನವೆಂಬರ್ 14, 2025

ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ನ.16 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ನ.14(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆವಿ ಮೀನಹಳ್ಳಿ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೆöÊಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಕೈಗೊಂಡಿರುವುದರಿAದ 110/11ಕೆ.ವಿ ಮೀನಹಳ್ಳಿ ಉಪಕೇಂದ್ರದಿAದ ವಿದ್ಯುತ್ ಸರಬರಾಜು ಆಗುವ 11ಕೆವಿ ಮತ್ತು 110ಕೆವಿ ಮಾರ್ಗಗಳಲ್ಲಿ ನ.16 ರಂದು ಬೆಳಿಗ್ಗೆ 09 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು* ಎಫ್-2 ಚಾಗನೂರು ಐಪಿ ಫೀಡರ್ ಮಾರ್ಗದ ಮೀನಹಳ್ಳಿ, ಶಿಡಿಗಿನಮೋಳ, ಕೆ.ವೀರಾಪುರ, ಕಾರೆಕಲ್ಲು, ಚಾಗನೂರು ಚಾಗನೂರು ಕೃಷಿ ಪ್ರದೇಶಗಳು. ಎಫ್-1 ಮೀನಹಳ್ಳಿ/ಕೆ.ವೀರಾಪುರ ಎನ್.ಜೆ.ವೈ ಮಾರ್ಗದ ಮೀನಹಳ್ಳಿ, ಶಿಡಿಗಿನಮೋಳ, ಕೆ.ವೀರಾಪುರ, ಕಾರೆಕಲ್ಲು ಗ್ರಾಮ. ಎಫ್-4 ಎ.ಟಿ.ಪಿ.ಎಸ್, ಎನ್.ಜೆ.ವೈ ಮಾರ್ಗದ ಹಗರಿ, ಪಿ.ಡಿ.ಹಳ್ಳಿ, ಕಗ್ಗಲ್, ಲಿಂಗದೇವನಹಳ್ಳಿ, ಯಾಳ್ಪಿ, ಜೋಳದರಾಶಿ, ಚೇಳ್ಳಗುರ್ಕಿ ಗ್ರಾಮ. ಎಫ್-5 ಹಗರಿ ಐಪಿ ಫೀಡರ್ ಮಾರ್ಗದ ಹಗರಿ, ಪಿ.ಡಿ.ಹಳ್ಳಿ, ಕಗ್ಗಲ್, ಲಿಂಗದೇವನಹಳ್ಳಿ, ಯಾಳ್ಪಿ, ಜೋಳದರಾಶಿ, ಚೇಳ್ಳಗುರ್ಕಿ ಕೃಷಿ ಪ್ರದೇಶಗಳು. ಎಫ್-6 ಫೀಡರ್ ಮಾರ್ಗದ ಎ-ಒನ್ ಗೋಲ್ಡ್ ಪೈಪ್ಸ್, ಮೆ.ಜಾನಕಿ ಕಾರ್ಪೋ,ಪ್ರೆöÊ.ಲಿ, ಮೆ.ಬಸಾಯಿ ಸ್ಟೀಲ್ ಪ್ರೆöÊ.ಲಿ, ಮೆ.ಕ್ಲೀನ್ ಮ್ಯಾಕ್ಸ್ ಸೊಲಾರ್, ಕ್ಲೀನ್ ಸೋಲಾರ್, ಮೆ.ಮೌರ್ಯ ಸೀಲಾಮ್ ಸೋಲಾರ್ ಐ.ಪಿ.ಪಿ ಸೇರಿ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ