ಶನಿವಾರ, ನವೆಂಬರ್ 15, 2025
ಅನಾಮಧೇಯ ಮೃತ ಮಹಿಳೆ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ನ.15(ಕರ್ನಾಟಕ ವಾರ್ತೆ):
ನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸೂಪರ್ ಪ್ಯಾಸೇಜ್ ಬ್ರೀಜ್ಡ್ ಹತ್ತಿರದ ಹೆಚ್‌ಎಲ್‌ಸಿ ಕಾಲುವೆಯಲ್ಲಿ ಸುಮಾರು 45 ರಿಂದ 50 ವರ್ಷದ ಅನಾಮಧೇಯ ಮೃತ ಮಹಿಳೆಯ ಶವವು ನ.14 ರಂದು ತೇಲಿಕೊಂಡು ಬಂದಿದ್ದು, ಮೃತಳ ವಾರಸುದಾರರು ತಿಳಿದಿರುವುದಿಲ್ಲ. ಪತ್ತೆಗೆ ಸಹರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.
ಚಹರೆ ಗುರುತು: ಎತ್ತರ ಅಂದಾಜು 4.5 ಅಡಿ, ಪಿಂಕ್ ಬಣ್ಣದ ಜಾಕೆಟ್ ಮತ್ತು ಕೇಸರಿ ಬಣ್ಣದ ಲಂಗ ಧರಿಸಿರುತ್ತಾಳೆ. ತಲೆ ಕೂದಲು ಉದುರಿರುತ್ತದೆ. ಎಡಗೈ ಮೇಲೆ ಈ ರಾಜು ಎಂದು ಕನ್ನಡದಲ್ಲಿ ಹಚ್ಚೆ ಗುರುತು ಹಾಗೂ ಬಲಗೈ ಮೇಲೆ ಹೂವಿನ ಡಿಜೈನ್‌ವುಳ್ಳ ಹಚ್ಚೆ ಗುರುತು ಇರುತ್ತದೆ.
ಅನಾಮಧೇಯ ಮೃತ ಮಹಿಳೆಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392258100 ಅಥವಾ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ದೂ.08392-276461 ಹಾಗೂ ಮೊ.9480803049 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ