ಸೋಮವಾರ, ನವೆಂಬರ್ 3, 2025
ಮಹಾನಗರ ಪಾಲಿಕೆ: ಬಿಡಾಡಿ ದನಗಳನ್ನು ಮನೆಯಲ್ಲಿಯೇ ಕಟ್ಟಿಕೊಳ್ಳಿ
ಬಳ್ಳಾರಿ,ನ.03(ಕರ್ನಾಟಕ ವಾರ್ತೆ):
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೀಡಾಡಿ ದನಗಳ ಮಾಲೀಕರು ತಮ್ಮ ದನ-ಕರುಗಳನ್ನು ಮನೆಯಲ್ಲಿಯೇ ಕಟ್ಟಿಕೊಳ್ಳಬೇಕು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಬೀಡಾಡಿ ದನಗಳು ಸಾರ್ವಜನಿಕ ರಸ್ತೆಗÀಳು ಹಾಗೂ ನಗರದ ಮುಖ್ಯ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಲಾಗಿ ತಿರುಗಾಡುವುದು ಹಾಗೂ ಮಲಗಿರುವುದು ಕಂಡುಬAದಿದ್ದು, ಇವುಗಳಿಂದ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆಯಾಗಿ ಅಪಘಾತಗಳಿಗೆ ಕಾರಣವಾಗುತ್ತಿವೆ ಹಾಗೂ ಬೀಡಾಡಿ ದನಗಳಿಗೂ ಸಹ ತೊಂದರೆ ಉಂಟಾಗುತ್ತಿದೆ. ಪಾಲಿಕೆಯು ಗಂಭೀರವಾಗಿ ಪರಿಗಣಿಸಿದೆ.
ಹಾಗಾಗಿ ಎಲ್ಲಾ ಬೀಡಾಡಿ ದನಗಳ ಮಾಲೀಕರು ತಮ್ಮ ತಮ್ಮ ದನಕರುಗಳನ್ನು ತಮ್ಮ ಸುಪರ್ದಿಯಲ್ಲಿಯೇ ಕಟ್ಟಿಕೊಳ್ಳಬೇಕು. ತಪ್ಪಿದಲ್ಲಿ ಪಾಲಿಕೆಯಿಂದ ಕಾರ್ಯಾಚರಣೆ ನಡೆಸಿ ಎಲ್ಲಾ ಬೀಡಾಡಿ ದನಗಳನ್ನು ಹಿಡಿದು ನಿಯಮಾನುಸಾರ ನಗರದಿಂದಾಚೆಗೆ ಸ್ಥಳಾಂತರಿಸಲಾಗುವುದು. ಯಾವುದೇ ಕಾರಣಕ್ಕೂ ಸಹ ಮರಳಿ ನೀಡಲಾಗುವುದಿಲ್ಲ ಹಾಗೂ ಅಂತಹ ಮಾಲೀಕರನ್ನು ಗುರುತಿಸಿ ಸಾರ್ವಜನಿಕ ಉಪದ್ರವದಡಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ