ಮಂಗಳವಾರ, ಫೆಬ್ರವರಿ 24, 2026

ಮೀನುಗಾರರಿಗೆ ಸಲಕರಣೆ ಕಿಟ್ ವಿತರಿಸಿದ ಶಾಸಕ ಜೆ.ಎನ್.ಗಣೇಶ್

ಬಳ್ಳಾರಿ,ಫೆ.24(ಕರ್ನಾಟಕ ವಾರ್ತೆ): ಮೀನುಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿಶೇಷ ಘಟಕ ಉಪಯೋಜನೆಯಡಿ ಕಂಪ್ಲಿ ಮತ್ತು ಕುರುಗೋಡು ಮೀನುಗಾರರಿಗೆ ಕಂಪ್ಲಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ (ಕಾವೇರಿ ಹ್ಯಾಂಡ್‌ಲೂಮ್ಸ್) ದ ಅಧ್ಯಕ್ಷರೂ ಆದ ಜೆ.ಎನ್.ಗಣೇಶ್ ಅವರು ಮಂಗಳವಾರ ಮೀನುಗಾರಿಕೆ ಸಲಕರಣೆ ಕಿಟ್ ವಿತರಿಸಿದರು. ಫಲಾನುಭವಿ ಯೋಜನೆಯಡಿ ಮೀನು ಮಾರಾಟಗಾರ ರಾಹುಲ್ ನಾಗಪ್ಪ ಅವರಿಗೆ ಶಾಸಕರು ನಾಲ್ಕು ಚಕ್ರದ ವಾಹನ ಖರೀದಿಗೆ ಸಹಾಯಧನದ ಚೆಕ್ ವಿತರಿಸಿದರು. ಇದೇ ವೇಳೆ ಮತ್ಸಾö್ಯಶ್ರಯ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ ಕಾರ್ಯಾದೇಶ ಪ್ರತಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮೀನುಗಾರಿಕೆ ಉಪನಿರ್ದೇಶಕ ಶಿವಣ್ಣ, ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಬಿ.ಭಾವನ ಸೇರಿದಂತೆ ಇಲಾಖಾ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಇದ್ದರು. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ