ಶುಕ್ರವಾರ, ಫೆಬ್ರವರಿ 27, 2026
ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಫೆ.27(ಕರ್ನಾಟಕ ವಾರ್ತೆ):
ನಗರದ ಕೇಂದ್ರ ಬಸ್ ನಿಲ್ದಾಣ (ಹೊಸ ಬಸ್ ನಿಲ್ದಾಣ) ದ ವಿದ್ಯುತ್ ಮತ್ತು ಸ್ಟೋರ್ ರೂಂ ಹಿಂಭಾಗ ಇರುವ ಕಟ್ಟೆಯ ಮೇಲೆ ಸುಮಾರು 50 ವರ್ಷದ ವ್ಯಕ್ತಿಯು ಆರೋಗ್ಯ ಸರಿಯಿಲ್ಲದೇ ಯಾವುದೋ ಒಂದು ಖಾಯಿಲೆಯಿಂದ ಬಳಲಿ ಮೃತಪಟ್ಟಂತೆ ಕಂಡುಬAದಿದ್ದು, ಮೃತನ ವಾರಸುದಾರರ ಬಗ್ಗೆ ಮಾಹಿತಿ ಇರುವುದಿಲ್ಲ. ಈ ಕುರಿತು ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರು ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಸಬ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.
ಮೃತ ವ್ಯಕ್ತಿಯ ಚಹರೆ: ಎತ್ತರ ಅಂದಾಜು 5.6 ಅಡಿ, ಅರ್ಧ ಇಂಚು ಉದ್ದದ ಬಿಳಿ ಮಿಶ್ರಿತ ಕಪ್ಪು ಕೂದಲು ಹಾಗೂ ಗಡ್ಡ, ಮೀಸೆ ಹೊಂದಿರುತ್ತಾನೆ. ಮೃತನ ಎಡಗೈ ಮೇಲೆ ಹಾವಿನ ಅಚ್ಚೆ ಗುರುತು ಹಾಕಿಸಿಕೊಂಡಿರುತ್ತಾನೆ.
ಮಾಸಿದ ಕಪ್ಪು ಬಣ್ಣದ ಆಫ್ ತೋಳಿನ ಟೀ ಶರ್ಟ್, ತಿಳಿ ನೀಲಿ ಬಣ್ಣದ ಲುಂಗಿ, ಕಂದು ಬಣ್ಣದ ಒಳ ಉಡುಪು ಧರಿಸಿರುತ್ತಾನೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯ ದೂ.08392-250033, ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ