ಗುರುವಾರ, ಫೆಬ್ರವರಿ 19, 2026
ತಾಯಿ ಮಕ್ಕಳು ಕಾಣೆ: ಪತ್ತೆಗೆ ಮನವಿ
ಬಳಾರಿ,ಫೆ.19(ಕರ್ನಾಟಕ ವಾರ್ತೆ):
ಸಂಡೂರು ತಾಲ್ಲೂಕಿನ ಅಂಕಮ್ಮನಹಾಳ್ ಗ್ರಾಮದ ನಿವಾಸಿ ಸುನೀತಾ ಎನ್ನುವ 28 ವರ್ಷದ ಮಹಿಳೆ ಹಾಗೂ ತನ್ನ ಮಕ್ಕಳಾದ ಸಮರ್ಥ್(9 ವರ್ಷ), ಸಾತ್ವಿಕ್(5 ವರ್ಷ) ಇವರುಗಳು ಫೆ.07 ರಂದು ಕಾಣೆಯಾಗಿರುವ ಕುರಿತು ಚೋರನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
*ಚಹರೆ ಗುರುತು:*
ಸುನೀತಾ: ಸುಮಾರು 5.2 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಹಸಿರು, ಬಿಳಿ ಬಣ್ಣದ ಸೀರೆ, ಕಂದು ಬಣ್ಣದ ಕುಪ್ಪಸ ಧರಿಸಿರುತ್ತಾಳೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾಳೆ.
ಸಮರ್ಥ್: ಸುಮಾರು 3.6 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ತೆಳ್ಳನೇಯ ಮೈಕಟ್ಟು ಹೊಂದಿದ್ದು, ಹಳದಿ ಬಣ್ಣದ ಅಂಗಿ, ನೀಲಿ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ.
ಸಾತ್ವಿಕ್: ಸುಮಾರು 2.4 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಹೊಂದಿದ್ದು, ನೀಲಿ ಬಣ್ಣದ ಅಂಗಿ, ನೀಲಿ ಪ್ಯಾಂಟ್ ಧರಿಸಿರುತ್ತಾನೆ.
ಮೇಲ್ಕಂಡ ಚಹರೆ ಗುರುತುಗಳುಳ್ಳ ತಾಯಿ ಮತ್ತು ಮಕ್ಕಳ ಬಗ್ಗೆ ಮಾಹಿತಿ ದೊರೆತಲ್ಲಿ ಚೋರನೂರು ಪೊಲೀಸ್ ಠಾಣೆಯ ದೂ.08395-295100, ಮೊ.9480803063, ಸಿಪಿಐ ಸಂಡೂರು ದೂ.08395-260100, ಮೊ.9480803036, ತೋರಣಗಲ್ಲು ಡಿಎಸ್‌ಪಿ ದೂ.08391-220326, ಮೊ.9480803010 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ