ಮಂಗಳವಾರ, ಫೆಬ್ರವರಿ 17, 2026
ಕುರುಗೋಡು ಉತ್ಸವ: ಮಾಲು ನಿಪ್ಪನಾಳ್, ಬಾಳು ಬೆಳಗುಂದಿ ಜಾನಪದ ಗಾಯನಕ್ಕೆ ಕುಣಿದು ಕುಪ್ಪಳಿಸಿದ ಜನತೆ
ಬಳ್ಳಾರಿ,ಫೆ.16(ಕರ್ನಾಟಕ ವಾರ್ತೆ):
ಉತ್ತರ ಕರ್ನಾಟಕ ಖ್ಯಾತ ಜಾನಪದ ಗಾಯಕರಾದ ಮಾಲು ನಿಪ್ಪನಾಳ್, ಬಾಳು ಬೆಳಗುಂದಿ ಅವರ ಜಾನಪದ ಹಾಡುಗಳಿಗೆ ಕುರುಗೋಡು ಜನತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಕುರುಗೋಡು ಉತ್ಸವದ ಅಂಗವಾಗಿ ಎರಡನೇ ದಿನವಾದ ಸೋಮವಾರ ಸಂಜೆ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ತಮ್ಮ ಹಾಡುಗಳ ಮೂಲಕ ಕಿಚ್ಚು ಹಚ್ಚಿದರು.
ಮೊದಲಿಗೆ ಮಾಲು ನಿಪ್ಪನಾಳ್ ‘ನಾ.. ಡ್ರೈವರ, ನನ್ನ ಲವ್ವರ’ ಹಾಡು ಹೇಳುವ ಮೂಲಕ ಜಾನಪದ ಸಂಗೀತ ರಸದೌತಣ ಉಣಬಡಿಸಿದರು.
ಬಳಿಕ ಬಾಳು ಬೆಳಗುಂದಿ, ‘ಕುಣಿತಾಳೋ.. ಕುಣಿತಾಳೋ’ ಸಾಂಗ್ ಹೇಳುವ ಮೂಲಕ ನೋಡುಗರನ್ನು ಕುಣಿಯುವಂತೆ ಮೋಡಿ ಮಾಡಿದರು.
ಹಸಿ ಜಾನಪದ ಸಂಗೀತ ಹಾಡುಗಳಿಗೆ ಕುರುಗೋಡು ಜನತೆ ತಲೆದೂಗಿ ಸಂಗೀತ ಆಲಿಸಿದ್ದು ಕಂಡುಬಂದಿತು.
=====
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)










ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ