ಬುಧವಾರ, ಫೆಬ್ರವರಿ 18, 2026

ಬಾಲಕ ನಾಪತ್ತೆ: ಪತ್ತೆಗೆ ಮನವಿ

ಬಳ್ಳಾರಿ,ಫೆ.18(ಕರ್ನಾಟಕ ವಾರ್ತೆ): ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆಯ 01ನೇ ವಾರ್ಡ್ನ ನಿವಾಸಿ ಯಮನೂರಪ್ಪ ಎನ್ನುವ 15 ವರ್ಷದ ಬಾಲಕ ಶಾಲೆಗೆ ಹೋಗಿಬರುತ್ತೇನೆ ಎಂದು ಹೇಳಿಹೋದವನು ಮನೆಗೆ ಬಾರದೇ ಫೆ.17 ರಂದು ಕಾಣೆಯಾಗಿದ್ದು, ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ತೆಗೆ ಸಹಕರಿಸಬೇಕು ಎಂದು ಸಬ್ ಇನ್ಸ್ಪೆಕ್ಟರ್ ಆಫ್ ಪೊಲೀಸ್ ಮನವಿ ಮಾಡಿದ್ದಾರೆ. ಚಹರೆ: ಎತ್ತರ 5.1 ಅಡಿ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ ಹೊಂದಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ತಿಳಿ ನೀಲಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಅಂಗಿ ಧರಿಸಿರುತ್ತಾನೆ. ಕಾಣೆಯಾದ ಬಾಲಕನ ಬಗ್ಗೆ ಮಾಹಿತಿ ದೊರೆತಲ್ಲಿ ತೆಕ್ಕಲಕೋಟೆ ಪೊಲೀಸ್ ಠಾಣೆಯ ಪಿಎಸ್‌ಐ ದೂ.08396-248013, ಮೊ.9480803055, ಸಿಪಿಐ ದೂ.08396-248044, ಬಳ್ಳಾರಿ ಗ್ರಾಮೀಣ ಉಪವಿಭಾಗ ಡಿಎಸ್‌ಪಿ ದೂ.08392-276000, ಬಳ್ಳಾರಿ ಎಸ್‌ಪಿ ದೂ.08392-258400 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ