ಮಂಗಳವಾರ, ಫೆಬ್ರವರಿ 10, 2026
ಕ್ರೀಡೆಗಳಿಂದ ನವಚೈತನ್ಯ: ಪ್ರೊ.ಎಂ ಮುನಿರಾಜು
ಬಳ್ಳಾರಿ,ಫೆ.10(ಕರ್ನಾಟಕ ವಾರ್ತೆ):
ನಿಯಮಿತ ಕ್ರೀಡಾ ಚಟುವಟಿಕೆಗಳಿಂದ ಮಾನವನ ಆರೋಗ್ಯ, ಆಯುಷ್ಯ ಹೆಚ್ಚುಗೊಂಡು ಬುದ್ಧಿ ತೀಕ್ಷ÷್ಣಗೊಳ್ಳುತ್ತದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲದ ಕುಲಪತಿ ಪ್ರೊ.ಎಂ ಮುನಿರಾಜು ಅವರು ಅಭಿಪ್ರಾಯಪಟ್ಟರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಿದ್ದ ಅಂತರ್ ಮಹಾವಿದ್ಯಾಲಯ ಪುರುಷ ಮತ್ತು ಮಹಿಳೆಯರ ಚೆಸ್ ಸ್ಫರ್ಧೆ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕ್ರೀಡಾ ಚಟುವಟಿಕೆಗಳು ಕಡಿಮೆಗೊಂಡಿವೆ. ಮೊಬೈಲ್ ಗೀಳು ಅವರಲ್ಲಿ ಹೆಚ್ಚಾಗಿದೆ. ಯುವಕರು ಇದರಿಂದ ಹೊರಬಂದರೆ ಮಾತ್ರ ಗುರಿ ಸಾಧನೆಗೆ ಸಾಧ್ಯವಾಗುತ್ತದೆ ಎಂದರು.
ಒಳಾAಗಣ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ಅವುಗಳದ್ದೇ ಆದ ವಿಶೇಷತೆಗಳಿದ್ದು, ನಮ್ಮ ಆಸಕ್ತಿ ಹಾಗೂ ಅಭಿರುಚಿಗೆ ತಕ್ಕಂತೆ ಆಟಗಳಲ್ಲಿ ತೊಡಗಿಕೊಳ್ಳಬೇಕು. ಕ್ರೀಡೆಗಳು ಆಹ್ಲಾದಕರ ಜೀವನಕ್ಕೆ ವರದಾನವಾಗಿವೆ ಎಂದು ತಿಳಿಸಿದರು.
ವಿವಿಯಲ್ಲಿ ಕ್ರೀಡಾ ಕೌಶಲ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಆವರಣದಲ್ಲಿ ಸುಸಜ್ಜಿತ ಕ್ರೀಡಾ ಕಾಂಪ್ಲೆಕ್ಸ್ ನಿರ್ಮಿಸುವ ಯೋಜನೆ ಪ್ರಗತಿ ಹಂತದಲ್ಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹಂಸಭಾವಿಯ ಎಂಎಎಸ್‌ಸಿ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಚೆಸ್ ತಾಂತ್ರಿಕ ತಜ್ಞರಾದ ವೆಂಕಟೇಶ್.ಪಿ ಅವರು ಮಾತನಾಡಿ ಸ್ಫರ್ಧಾರ್ಥಿಗಳ ಪಾರದರ್ಶಕ ಆಯ್ಕೆಗೆ ಚೆಸ್ ಸಾಫ್ಟ್ವೇರ್ ಮೂಲಕ ಸಂಪೂರ್ಣ ಆಯ್ಕೆ ವಿಧಾನವನ್ನು ನಿಭಾಯಿಸುತ್ತಿರುವುದಾಗಿ ತಿಳಿಸಿದರು.
ಮತ್ತೋರ್ವ ಅತಿಥಿಯಾಗಿ ಜಿಲ್ಲಾ ಚೆಸ್ ಸಂಸ್ಥೆಯ ಕಾರ್ಯದರ್ಶಿ ನಾಗರಾಜ ಮಾತನಾಡಿ, ಚೆಸ್ ಆಟದಿಂದ ಏಕಾಗ್ರತೆ, ಆಸಕ್ತಿ ಹಾಗೂ ತಾಳ್ಮೆ ಹೆಚ್ಚಾಗುತ್ತದೆ. ವಿಶ್ವನಾಥನ್ ಆನಂದ್, ಗುಕೇಶ್ ಅವರಂತ ಪ್ರತಿಭೆಗಳು ನಮ್ಮ ದೇಶದ ಹೆಮ್ಮೆ ಎಂದರು.
ಇತ್ತೀಚೆಗೆ ಉಜ್ಬೇಕಿಸ್ತಾನದಲ್ಲಿ ನಡೆದಿದ್ದ ಓಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪುರುಷ ಮತ್ತು ಮಹಿಳಾ ಚೆಸ್ ತಂಡಗಳು ಚಿನ್ನದ ಪದಕ ಪಡೆದಿದ್ದಾರೆ. ಇದೇ ರೀತಿ ಆಟದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಶ್ರಮವಹಿಸಿ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ವಿವಿಯ ಕ್ರೀಡಾ ವಿಭಾಗದ ನಿರ್ದೇಶಕ ಡಾ.ಶಶಿಧರ್ ಕೆಲ್ಲೂರ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಂಯೋಜಕ ಡಾ.ಸಂಪತ್ ಕುಮಾರ್, ಸಹಾಯಕ ಕ್ರೀಡಾ ನಿರ್ದೇಶಕ ಬೀರಲಿಂಗಪ್ಪ ವೇದಿಕೆಯಲ್ಲಿದ್ದರು.
ವಿವಿ ಅಧೀನದ ಕಾಲೇಜುಗಳ ಸುಮಾರು 11 ಪುರುಷರ ತಂಡ ಮತ್ತು 6 ಮಹಿಳಾ ತಂಡಗಳು ಆಯ್ಕೆ ಹಂತದಲ್ಲಿ ಸ್ಫರ್ಧಿಸಿದ್ದಾರೆ. ವಿವಿಯ ವಿವಿಧ ವಿಭಾಗಗಳ ಸಿಬ್ಬಂದಿ, ವಿವಿಧ ಕಾಲೇಜುಗಳ ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ