ಬುಧವಾರ, ಮಾರ್ಚ್ 4, 2026

ಕಂಪ್ಲಿ: ಮಾ.06 ರಂದು ವಿದ್ಯುತ್ ವ್ಯತ್ಯಯ

ಕಂಪ್ಲಿ: ಮಾ.06 ರಂದು ವಿದ್ಯುತ್ ವ್ಯತ್ಯಯ ಬಳ್ಳಾರಿ,ಮಾ.04(ಕರ್ನಾಟಕ ವಾರ್ತೆ): ಕಂಪ್ಲಿ ಜೆಸ್ಕಾಂ ವ್ಯಾಪ್ತಿಯ ಮೆಟ್ರಿ 110ಕೆವಿ ಉಪ ಕೇಂದ್ರದಲ್ಲಿ ವಿದ್ಯುತ್ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ಮಾ.06 ರಂದು ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ಮೆಟ್ರಿ, ದೇವಲಾಪುರ, ಸುಗ್ಗೇನಹಳ್ಳಿ ಪಂಚಾಯತಿಯ ಎಲ್ಲ ಗ್ರಾಮಗಳು ಮತ್ತು ಹಂಪಾದೇವನಹಳ್ಳಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಮೆಟ್ರಿ ಉಪ ಕೇಂದ್ರಕ್ಕೆ ಸಂಬAಧಿಸಿದ ಐಪಿ ಸೆಟ್ ಮಾರ್ಗಗಳಲ್ಲಿ ಅಂದು ಬೆಳಿಗ್ಗೆ 04 ರಿಂದ 09 ಗಂಟೆಯವರೆಗೆ ಬಾಕಿ ಉಳಿದ ಸಮಯವನ್ನು ಸಂಜೆ 05 ಗಂಟೆಯ ನಂತರ ಸರಬರಾಜು ಮಾಡಲಾಗುವುದು. ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ