ಗುರುವಾರ, ಏಪ್ರಿಲ್ 2, 2026

ಬಳ್ಳಾರಿ ನಗರದ ವಿವಿಧ ವೃತ್ತ, ರಸ್ತೆಗೆÀ ನಾಮಕರಣ: ಆಕ್ಷೇಪಣೆ ಸಲ್ಲಿಸಲು ಅವಕಾಶ

ಬಳ್ಳಾರಿ,ಏ.02(ಕನಾಟಕ ವಾರ್ತೆ): ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವೃತ್ತ ಹಾಗೂ ರಸ್ತೆಗಳಿಗೆ ನಾಮಕರಣ ಮಾಡಲು ಉದ್ದೇಶಿಸಲಾಗಿದ್ದು, ಈ ಕುರಿತು ಸಲಹೆ, ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಪಾಲಿಕೆ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್ ಮಂಜುನಾಥ್ ಅವರು ತಿಳಿಸಿದ್ದಾರೆ. ವೃತ್ತ ಮತ್ತು ರಸ್ತೆಗಳಿಗೆ ಹೊಸದಾಗಿ ಹೆಸರು ನಾಮಕರಣ ಮಾಡಲು ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ, ಸಭೆಯ ಸರ್ವಾನುಮತದಿಂದ ಮಂಜೂರಾತಿ ನೀಡಿದೆ. ಬಳ್ಳಾರಿ ನಗರದ ವಾರ್ಡ್ ನಂ.34ರ ವಿದ್ಯಾನಗರ ವೃತ್ತಕ್ಕೆ “ಶ್ರೀ ದಿ|| ಎ.ಸಿ.ವೆಂಕಟಸ್ವಾಮಿ ವೃತ್ತ”, ಸಂಗನಕಲ್ಲು (ಮೋಕಾ ರಸ್ತೆ) ರಸ್ತೆಯ ರೇಣುಕಾ ಕಿಚನ್ ಎದುರುಗಡೆ ಭಗೀರಥ ನಾಮಫಲಕ ಅಳವಡಿಕೆ ಮತ್ತು ನಗರದ ಕೆ.ಕೆ.ಆರ್.ಟಿ.ಸಿ ಹೊಸ ಬಸ್ ನಿಲ್ದಾಣದ ಮುಂದೆ ಇರುವ ಮುಖ್ಯ ರಸ್ತೆಯಿಂದ ಶ್ರೀ ಮಾರ್ಕಂಡೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು “ಶ್ರೀ ಭಕ್ತ ಮಾರ್ಕಂಡೇಶ್ವರ ರಸ್ತೆ” ಎಂದು ನಾಮಕರಣ ಮಾಡಲು ಉದ್ದೇಶಿಸಲಾಗಿದೆ. ಹಾಗಾಗಿ, ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆಗಳು ಇದ್ದಲ್ಲಿ, ಬಳ್ಳಾರಿ ಮಹಾನಗರಪಾಲಿಕೆಯ ಆಯುಕ್ತರ ಕಚೇರಿಗೆ 30 ದಿನಗಳೊಳಗಾಗಿ ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ. ನಿಗಧಿಪಡಿಸಿದ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗದೇ ಇದ್ದಲ್ಲಿ ಸರ್ಕಾರದ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ