ಗುರುವಾರ, ಜೂನ್ 11, 2026
ಜೂ.13 ರಂದು ಬಳ್ಳಾರಿ ಗ್ರಾಮೀಣದಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಜೂ.11(ಕರ್ನಾಟಕ ವಾತೆ):
ಬಳ್ಳಾರಿ ಗ್ರಾಮೀಣ ಜೆಸ್ಕಾಂ 110/11ಕೆ.ವಿ ದಕ್ಷಿಣ ಉಪ-ಕೇಂದ್ರದÀ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೆöÊಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ಜೂ.13 ರಂದು ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*
ಎಫ್43 - ಸಿದ್ದಾಪುರ ರಸ್ತೆ ಕೈಗಾರಿಕಾ ಮಾರ್ಗದ ಟಪಾಲ್ ಸ್ಟೀಲ್, ಸಿದ್ದಾಪುರ ರಸ್ತೆ, ಕೈಗಾರಿಕಾ ಪ್ರದೇಶ. ಎಫ್30- ಗುಗ್ಗರಹಟ್ಟಿ ನಗರ ಮಾರ್ಗದ ಗುಗ್ಗರಹಟ್ಟಿ ಗ್ರಾಮ, ಮುಂಡರಗಿ ಹಳೆ ಬೈಪಾಸ್ ರಸ್ತೆ.
ಎಫ್27- ಆಂಧ್ರಾಳ್ ನಗರ ಮಾರ್ಗದ ಅಂದ್ರಾಳ್, ಪಾತ್ರಬೂದಿಹಾಳ್, ಮಂಗಮ್ಮ ಕ್ಯಾಂಪ್, ಚರಕುಂಟೆ ಗ್ರಾಮ. ಎಫ್-29 ಮಿಂಚೇರಿ ಎನ್.ಜೆ.ವೈ ಮಾರ್ಗದ ಮಿಂಚೇರಿ ಗ್ರಾಮ, ಎಸ್.ಜೆ ಕೋಟೆ ಗ್ರಾಮ, ಮುಂಡರಗಿ ಗ್ರಾಮ. ಎಫ್-26 ಚರಕುಂಟ ಐ.ಪಿ ಫೀಡರ್ ಮಾರ್ಗದ ಮುಂಡರಗಿ, ಚರಕುಂಟೆ, ವೈಬೂದಿಹಾಳ್ ಕೃಷಿ ಪ್ರದೇಶಗಳು.
ಹಾಗಾಗಿ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ