ಶುಕ್ರವಾರ, ಜೂನ್ 12, 2026

ನ್ಯಾಕ್ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪ್ರೊ.ನಾಗೇಶ್ವರ ರಾವ್ ಅಭಿಮತ | ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಆನ್‌ಲೈನ್ ಕಲಿಕೆ ಅಗತ್ಯ

ಬಳ್ಳಾರಿ,ಜೂ.12(ಕರ್ನಾಟಕ ವಾರ್ತೆ): ಉನ್ನತ ಶಿಕ್ಷಣದ ಆಶಯಗಳನ್ನು ಸಾಕಾರಗೊಳಿಸಲು ಭಾರತ ಸರ್ಕಾರವು ಸ್ವಯಂ, ಮೂಕ್ಸ್ ಮಾದರಿಯ ಆನ್‌ಲೈನ್ ಕಲಿಕಾ ಕೋರ್ಸ್ಗಳನ್ನು ಪರಿಚಯಿಸಿದ್ದು, ವಿದ್ಯಾರ್ಥಿಗಳು ತಮ್ಮ ಜ್ಞಾನಾಭಿವೃದ್ಧಿಗೆ ಆನ್‌ಲೈನ್ ಕಲಿಕಾ ಪ್ರಕ್ರಿಯೆಗೆ ಹೊಂದಿಕೊಳ್ಳಬೇಕು ಎಂದು ನವದೆಹಲಿಯ ನ್ಯಾಕ್ ಸಮಿತಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪ್ರೊ.ನಾಗೇಶ್ವರ ರಾವ್ ಅವರು ಹೇಳಿದರು. ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ಸಭಾಂಗಣದಲ್ಲಿ ಶುಕ್ರವಾರದಿಂದ ಆರಂಭವಾಗಿರುವ ವಾಣಿಜ್ಯ ಹಾಗೂ ನಿರ್ವಹಣಾಶಾಸ್ತç ಅಧ್ಯಾಪಕರ ರಾಜ್ಯ ಸಂಘ ಹಾಗೂ ವಿಶ್ರೀಕೃವಿವಿ ಸಹಭಾಗಿತ್ವದಲ್ಲಿ ಆಯೋಜಿಸಿರುವ ಎರಡು ದಿನಗಳ ‘ತಂತ್ರಜ್ಞಾನ ಆಧಾರಿತ ವ್ಯವಹಾರ ಪದ್ಧತಿಗಳು ಮತ್ತು ಕಾರ್ಯತಂತ್ರದ ಜಾಗತಿಕ ಸಮಾಗಮ’ ಎಂಬ ವಿಚಾರ ಸಂಕಿರಣ ಗಣ್ಯರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಕ್ ಸಮಿತಿಯು ಶಿಕ್ಷಣ ಸಂಸ್ಥೆಗಳಲ್ಲಿನ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡುತ್ತದೆ. ಗುಣಮಟ್ಟದ ಶಿಕ್ಷಣ ಒದಗಿಸುವ ಸಂಸ್ಥೆಗಳಿಗೆ ಅರ್ಹತೆಗೆ ಅನುಗುಣವಾಗಿ ಗ್ರೇಡ್‌ಗಳನ್ನು ನೀಡುತ್ತದೆ. ನ್ಯಾಕ್ ಮಾನ್ಯತೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಮೌಲ್ಯಮಾಪನ ವ್ಯವಸ್ಥೆಗಳಿದ್ದು, ಆಯಾ ಮಾನದಂಡಗಳಿಗೆ ಅನುಸಾರವಾಗಿ ಗ್ರೇಡಿಂಗ್‌ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಕಾಲೇಜು ಶಿಕ್ಷಣ ಮತ್ತು ಉನ್ನತ ಶಿಕ್ಷಣವು ಸದೃಢವಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್ ಕೋರ್ಸ್ಗಳಿಗೆ ನೋಂದಣಿ ಮಾಡಿಕೊಂಡು ವರ್ಷಕ್ಕೆ ಒಂದಾದರೂ ಕೋರ್ಸ್ ಪೂರ್ಣಗೊಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಬೆಂಗಳೂರಿನ ಥಾಮ್ಸನ್ ರಾಯ್ರ‍್ಸ್ ಎಐ ಕೇಂದ್ರದ ಹಿರಿಯ ನಿರ್ದೇಶಕ ಡಾ.ರಮೇಶ್ ಬಾಬು ಚಲ್ಲಪ್ಪನ್ ಅವರು ಮಾತನಾಡಿ, ಎಐ ಎಂದಿಗೂ ಮಾನವನ ಕೆಲಸ ಕಸಿಯಲು ಸಾಧ್ಯವಿಲ್ಲ. ವರ್ತಮಾನಕ್ಕೆ ತಕ್ಕಂತೆ ತಂತ್ರಜ್ಞಾನಗಳ ಜ್ಞಾನ ಪಡೆದುಕೊಂಡು ಸಾಗಿದರೆ ಯಾವ ಕೆಲಸವೂ ಕಷ್ಟವಲ್ಲ ಎಂದರು. ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾರು ಮೂಲತಃ ಬಳ್ಳಾರಿಯವರಾದ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಖ್ಯಾತ ಲೆಕ್ಕ ಪರಿಶೋಧಕ ಸಿ ಎ ಕೆ ಗುರುರಾಜ್ ಅವರು ಮಾತನಾಡಿ, 20 ವರ್ಷಗಳ ಹಿಂದಿನ ಶಿಕ್ಷಣ ಪದ್ಧತಿಗೂ ಹಾಗೂ ಇಂದಿನ ಡಿಜಿಟಲ್ ವಿದ್ಯಮಾನಗಳಿಗೂ ಸಾಕಷ್ಟು ಬದಲಾವಣೆಗಳಾಗಿವೆ. ಎಲ್ಲ ಕ್ಷೇತ್ರಗಳಲ್ಲಿಯೂ ಡಿಜಿಟಲ್ ಪದ್ಧತಿ ಅಳವಡಿಕೆಗೊಂಡಿದೆ. ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಸಾಂಪ್ರದಾಯಿಕ ಅಕೌಂಟಿAಗ್ ಮತ್ತು ಆದಾಯ ತೆರಿಗೆ ಪದ್ಧತಿಯೂ ರೂಪಾಂತರಗೊAಡಿವೆ ಎಂದರು. ಸ್ವಯA ಅಧ್ಯಯನ, ವಿದ್ಯಾರ್ಥಿಗಳಲ್ಲಿ ವಿಶ್ವಾಸಾರ್ಹತೆ ಹೆಚ್ಚಿಸುವುದು, ಆಲೋಚನಾ ಶಕ್ತಿ, ತಾಂತ್ರಿಕ ಕಲಿಕೆಗೆ ಉತ್ತೇಜನ, ನೈತಿಕ ಜವಾಬ್ದಾರಿಗಳನ್ನು ತಿಳಿಸಿಕೊಡುವುದರಿಂದ ಒಬ್ಬ ಉತ್ತಮ ಪ್ರಜೆಯನ್ನು ರೂಪಿಸಬಹುದು ಎಂದು ಹೇಳಿದರು. ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ವಿವಿಧ ಹೊಸ ಕೋರ್ಸ್ಗಳನ್ನು ಸ್ಥಾಪಿಸುವುದು. ಕ್ಯಾಂಪಸ್‌ನಲ್ಲಿ ಐಟಿ ಮತ್ತು ಬಯೋ ಇನ್ನೋವೇಷನ್ ಸೆಂಟರ್, ಸ್ಪೋರ್ಟ್ಸ್ ಅಕ್ಯಾಡೆಮಿ ತೆರೆಯಲಾಗುವುದು ಮತ್ತು ಮುಂದಿನ ಘಟಿಕೋತ್ಸವಕ್ಕೆ ದೇಶದ ರಾಷ್ಟçಪತಿಗಳನ್ನು ಆಹ್ವಾನಿಸಿ ಈ ಭಾಗಕ್ಕೆ ಬಲ ತುಂಬಲು ಪ್ರಯತ್ನಿಸುವುದಾಗಿ ತಿಳಿಸಿದರು. ರಾಣಿ ಚನ್ನಮ್ಮ ವಿವಿಯ ನಿವೃತ್ತ ಕುಲಪತಿ ಪ್ರೊ.ಎಂ ರಾಮಚಂದ್ರರಾವ್ ಅವರು ಮಾತನಾಡಿ, ತಾಂತ್ರಿಕ ಆಧಾರಿತ ಹಾಗೂ ಔದ್ಯೋಗಿಕ ಆಧಾರಿತ ಶಿಕ್ಷಣವನ್ನು ಪಠ್ಯದಲ್ಲಿ ಅಳವಡಿಸಿದಲ್ಲಿ ವಿದ್ಯಾರ್ಥಿಗಳು ಕೆಲಸ ಪಡೆಯಬಹುದು. ನ್ಯಾಕ್ ಮಾನ್ಯತೆಯಿಂದ ಅನುದಾನಗಳು ಸಿಗುವಂತಾದರೆ ಎಲ್ಲ ಕಾಲೇಜುಗಳು ನ್ಯಾಕ್ ಮಾನ್ಯತೆಗೆ ಮುಂದಾಗುತ್ತಾರೆ. ಮುಂದಿನ 10 ವರ್ಷಗಳ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿವಿಗಳು ಪಠ್ಯಕ್ರಮ ರಚಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ಹಾಗೂ ನಿರ್ವಹಣಾಶಾಸ್ತç ಅಧ್ಯಾಪಕರ ರಾಜ್ಯ ಸಂಘದ ಅಧ್ಯಕ್ಷ ಪ್ರೊ.ಬಾಲಕೃಷ್ಣ ಪೈ ಅವರು ಮಾತನಾಡಿ, ಬದಲಾವಣೆ ಜಗತ್ತಿನ ನಿರಂತರ ನಿಯಮವಾಗಿದೆ. ಅವುಗಳಿಗೆ ತಕ್ಕಂತೆ ಸಾಗುವುದು ನಮ್ಮೆಲ್ಲರ ಕರ್ತವ್ಯ. ಕಲ್ಯಾಣ ಕರ್ನಾಟಕ ಭಾಗದ ವಾಣಿಜ್ಯ ಮತ್ತು ನಿರ್ವಹಣಾಶಾಸ್ತç ಪ್ರಾಧ್ಯಾಪಕರು ಹಾಗೂ ಪರಿಣಿತರನ್ನು ವಿಶ್ವವಿದ್ಯಾಲಯಗಳಿಗೆ ಆಹ್ವಾನಿಸಿ ಅವರ ಪ್ರಗತಿಪರ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಕೆಲಸ ಆಗಲಿ ಎಂದು ಆಶಿಸಿದರು. ಕಾರ್ಯಕ್ರಮದ ಭಾಗವಾಗಿದ್ದ ವಾಣಿಜ್ಯ ಹಾಗೂ ನಿರ್ವಹಣಾಶಾಸ್ತç ವಿಷಯಗಳ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ನಿವೃತ್ತ ಹಿರಿಯ ಪ್ರಾಧ್ಯಾಪಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಎರಡು ದಿನಗಳ ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 500ಕ್ಕೂ ಹೆಚ್ಚು ಪ್ರಾಧ್ಯಾಪಕ ವರ್ಗ, ಸಂಶೋಧಕ ವರ್ಗ ಆಗಮಿಸಿದೆ. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿ ಲೋಕೇಶ್, ವಿತ್ತಾಧಿಕಾರಿ ಸ್ಫೂರ್ತಿ ಕೆ.ಜಿ., ವಿಶ್ವವಿದ್ಯಾಲಯದ ಡೀನರಾದ ಪ್ರೊ.ಸದ್ಯೋಜಾತಪ್ಪ ಎಸ್., ಪ್ರೊ.ಜಿ.ಪಿ ದಿನೇಶ್, ಎಫ್‌ಟಿಸಿಸಿಎಂಕೆಯ ಖಜಾಂಚಿ ಡಾ.ಎಂ ಜಯಪ್ಪ, ಕಾರ್ಯದರ್ಶಿ ಲೂಯಿಸ್ ಮನೋಜ್ ಅಂಬ್ರೋಸ್, ಡಾ.ಎಸ್.ರಮೇಶ್, ವಿವಿಯ ವಾಣಿಜ್ಯಶಾಸ್ತç ವಿಭಾಗದ ಮುಖ್ಯಸ್ಥ ಡಾ.ರವಿ, ಸಂಘದ ಜಿಲ್ಲಾ ಅಧ್ಯಕ್ಷ ಡಾ.ರಾಮಚಂದ್ರ, ಸಂಕಿರಣದ ಸಂಚಾಲಕ ಅಧ್ಯಕ್ಷ ಡಾ.ಹೆಚ್ ರಾಮಕೃಷ್ಣ, ಸಂಕಿರಣದ ಕಾರ್ಯದರ್ಶಿ ಡಾ.ಪ್ರಹ್ಲಾದ್ ಚೌದ್ರಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮವನ್ನು ನಿರ್ವಹಣಾಶಾಸ್ತç ವಿಭಾಗದ ಸಹ ಪ್ರಾಧ್ಯಾಪಕ ಡಾ.ನಿರ್ಮಲಾ ನಿರೂಪಿಸಿದರು. ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ವಿಶ್ವವಿದ್ಯಾಲಯದ ಎಲ್ಲ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ವರ್ಗ, ಸಂಶೋಧನಾ ವಿದ್ಯಾರ್ಥಿಗಳು ಇದ್ದರು. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ