ಶುಕ್ರವಾರ, ಜೂನ್ 12, 2026
ಜೂ.14 ರಂದು ಬಳ್ಳಾರಿ ಗ್ರಾಮೀಣದಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಜೂ.12(ಕರ್ನಾಟಕ ವಾರ್ತೆ):
ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11 ಕೆ.ವಿ. ಹಲಕುಂದಿ ವಿದ್ಯುತ್ ಉಪ-ಕೇಂದ್ರದ ವಿತರಣಾ ಕೇಂದ್ರದಲ್ಲಿ ತುರ್ತು ತ್ರೆöÊಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದರಿಂದ ಜೂ.14 ರಂದು ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ಹಲಕುಂದಿ ಉಪ-ಕೇಂದ್ರದಿAದ ಸರಬರಾಜಾಗುವ ವಿವಿಧ 11 ಕೆ.ವಿ. ಮಾರ್ಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ (ಜೆಸ್ಕಾಮ್) ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ ಮೋಹನಬಾಬು ಅವರು ತಿಳಿಸಿದ್ದಾರೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*
ಎಫ್-1 ಗ್ಯಾಲಕ್ಸಿ ಕೆಮಿಕಲ್ಸ್ ಮಾರ್ಗದ ಲೋಹಿತ್ ಕೆಮಿಕಲ್ಸ್, ಗ್ಯಾಲಕ್ಸಿ ಕೆಮಿಕಲ್ಸ್ 2ನೇ ಹಂತ ಮತ್ತು 3ನೇ ಹಂತ. ಎಫ್-2 ಸುಧಾಕರ್ ಪೈಪ್ ಮಾರ್ಗದ ಸುಧಾಕರ್ ಪೈಪ್ 2ನೇ ಹಂತ ಮತ್ತು 3ನೇ ಹಂತ. ಎಫ್-4 ಗುರುನಾಥ್ ರೈಸ್ ಮಿಲ್ ಮಾರ್ಗದ ಗುರುನಾಥ್ ರೈಸ್ ಮಿಲ್, ಶ್ಯಾಮ್ ಸುಂದರ್ ಕೋಲ್ಡ್ ಸ್ಟೋರೇಜ್, ಮುಂಡರಿಗಿ ಕೈಗಾರಿಕಾ ಪ್ರದೇಶದ 2ನೇ ಮತ್ತು 3ನೇ ಹಂತ.
ಎಫ್-5 ಅಪೇರಲ್ ಪಾರ್ಕ್ ಮಾರ್ಗದ ಮುಂಡರಿಗಿ ಕೈಗಾರಿಕಾ ಪ್ರದೇಶದ 4ನೇ ಹಂತ. ಎಫ್-6 ಸ್ನೇಹ ಗ್ಲಾಸ್ ಮಾರ್ಗದ ಹೈಟೆಕ್ ರೈಸ್ ಮಿಲ್, ರಾಘವೇಂದ್ರ ರೈಸ್ ಮಿಲ್, ಮುಂಡರಿಗಿ ಕೈಗಾರಿಕಾ ಪ್ರದೇಶದ 2ನೇ ಮತ್ತು 3ನೇ ಹಂತ.
ಎಫ್-11 ಯಶಸ್ವಿನಿ ಸ್ಪಾಂಜ್ ಕೈಗಾರಿಕೆ ಮಾರ್ಗದ ಯಶಸ್ವಿನಿ ಸ್ಪಾಂಜ್, ವೆಂಕಟೇಶ್ವರ ಮತ್ತು ವಿವಾನ್ ಕೋಲ್ಡ್ ಸ್ಟೋರೇಜ್, ಮಿಂಚೇರಿ ಹಿಲ್ಸ್, ಕೈಗಾರಿಕಾ ಪ್ರದೇಶ, ಹಲಕುಂದಿ ಗ್ರಾಮ. ಎಫ್-10 ಮಿಂಚೇರಿ ಐ.ಪಿ ಮಾರ್ಗದ ಹಲಕುಂದಿ, ಮಿಂಚೇರಿ ಹಾಗೂ ಎಸ್.ಜೆ. ಕೋಟೆ ಕೃಷಿ ಪ್ರದೇಶಗಳು.
ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ