ಸೋಮವಾರ, ಫೆಬ್ರವರಿ 12, 2024
ಸ್ವಯಂಪ್ರೇರಿತ ಅಂಗಾಂಗ ದಾನ ನೋಂದಣಿ ಶಿಬಿರ
ಬಳ್ಳಾರಿ,ಫೆ.12(ಕರ್ನಾಟಕ ವಾರ್ತೆ):
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿಮ್ಸ್ ಇವರ ಸಹಕಾರದೊಂದಿಗೆ ನಗರದ ಜೈನ್ ಮಾರ್ಕೆಟ್ ಬಳಿ ಗುರುಪುಷ್ಕರ ಜೈನ ಸೇವಾ ಸಮಿತಿ ವತಿಯಿಂದ ಭಾನುವಾರ ಸ್ವಯಂಪ್ರೇರಿತ ಅಂಗಾಂಗ ದಾನ ನೋಂದಣಿ ಶಿಬಿರ ಹಮ್ಮಿಕೊಳ್ಳಲಾಯಿತು.
ಶ್ರೀ ಗುರುಪುಷ್ಕರ ಜೈನ ಸೇವಾ ಸಮಿತಿಯ ಉಪಾಧ್ಯಕ್ಷರಾದ ಸುರಜಮಲ್ ಅವರು ಅಂಗಾಂಗ ದಾನ ನೋಂದಣಿ ಶಿಬಿರಕ್ಕೆ ಚಾಲನೆ ನೀಡಿದರು.
ಜೈನ ಮಾರ್ಕೆಟ್ ಹಾಗೂ ಇತರೆ ಮಾರುಕಟ್ಟೆಯ ಅಂಗಡಿಗಳಿಗೆ ತೆರಳಿ ನೋಂದಣಿ ಮಾಡಿಸಲಾಯಿತು.
ಇಂದು ರಾಷ್ಟ್ರ ಮಟ್ಟದಲ್ಲಿ ಬಳ್ಳಾರಿ ಜಿಲ್ಲೆಯು ಮೊದಲ ಸ್ಥಾನದಲ್ಲಿದ್ದು, ಇಲ್ಲಿಯವರೆಗೆ ಒಟ್ಟು 4240 ನೋಂದಣಿ ಮಾಡಿಸಲಾಗಿದೆ. ಇವರಲ್ಲಿ 2238 ಪುರುಷರು, 2002 ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ.
ಶಿಬಿರದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರಕುಮಾರ, ವೈದ್ಯಾಧಿಕಾರಿ ಡಾ.ಕರುಣಾ, ನೇತ್ರ ತಜ್ಞೆ ಡಾ.ಶರಣ್ಯ, ಡಾ.ಕಾರ್ತಿಕ್, ಡಾ.ಕಾವ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಸೇವಾ ಸಮಿತಿಯ ಕೇವಲ್ ಚಂದ್ರ, ಅಶೋಕ ಭಂಡಾರಿ, ಪ್ರಕಾಶ ಮೆಹ್ತಾ, ಪೂಲಚಂದ, ಸುರೇಶ ಕುಮಾರ, ದಿನೇಶ, ಸುರೇಶ ವಿನಕಿಯಾ, ಧನರಾಜ್ ಸೇರಿದಂತೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ವೈದ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)






ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ