ಬುಧವಾರ, ಮೇ 1, 2024

ನಿಡಗುರ್ತಿಯಲ್ಲಿ ಕೇಕ್ ಕತ್ತರಿಸಿ ಕಾರ್ಮಿಕರ ದಿನಾಚರಣೆ ಅರ್ಹ ಮತದಾರರು ಮೇ 07 ರಂದು ತಪ್ಪದೇ ಮತ ಚಲಾಯಿಸಲು ಕರೆ: ಲಕ್ಷ್ಮಿಪತಿ

ಬಳ್ಳಾರಿ,ಮೇ.01(ಕರ್ನಾಟಕ ವಾರ್ತೆ): ಮೇ 07 ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ 18 ವರ್ಷ ಪೂರೈಸಿದ ಪ್ರತಿಯೊಬ್ಬ ಅರ್ಹ ನಾಗರಿಕರು ತಪ್ಪದೇ ಮತ ಚಲಾಯಿಸಿ ಎಂದು ನಿಡಗುರ್ತಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲಕ್ಷ್ಮಿಪತಿ ಅವರು ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ಸಂಡೂರು ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ಇವರ ಸಹಯೋಗದಲ್ಲಿ ನಿಡಗುರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಕುಂಟೆ ಕೆರೆ ಪ್ರದೇಶದಲ್ಲಿ ಮನರೇಗಾ ಕಾಮಗಾರಿ ಸ್ಥಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಮತದಾನ ಜಾಗೃತಿ ಅರಿವು ಮೂಡಿಸಿ ಅವರು ಮಾತನಾಡಿದರು. ಮನರೇಗಾ ಕೆಲಸದಡಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಕೇಕ್ ಕತ್ತರಿಸುವ ಮೂಲಕ ಆಚರಿಸುವುದರೊಂದಿಗೆ ಮೇ 07 ರಂದು ನಡೆಯುವ ಮತದಾನ ಪ್ರಕ್ರಿಯೆಯು ಹಬ್ಬದ ಸ್ವರೂಪವಾಗಿದ್ದು, ಶ್ರೇಷ್ಠ ನಾಯಕರನ್ನು ಆರಿಸಬೇಕು ಎಂದು ಮತದಾನ ಜಾಗೃತಿ ಮೂಡಿಸಿದರು. ಈ ವೇಳೆ ಕಾರ್ಮಿಕರಿಗೆ ಮತದಾನದ ಪ್ರತಿಜ್ಞಾ ವಿಧಿ ಭೋದಿಸಲಾಯಿತು ಹಾಗೂ ನರೇಗಾದ ಉಚಿತ ಸಹಾಯವಾಣಿ (8277506000) ಕುರಿತು ಕಾರ್ಮಿಕರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಐಇಸಿ ಸಂಯೋಜಕ ವೆಂಕಪ್ಪ, ಗ್ರಾಪಂ ತಾಂತ್ರಿಕ ಸಹಾಯಕ ರಾಘವೇಂದ್ರ, ಕಂದಾಯ ವಸೂಲಿಗಾರ ಈರಣ್ಣ, ಡಿಇಒ ಮಂಜುನಾಥ, ಬಿಎಫ್‍ಟಿ ತಿಂದಪ್ಪ, ಆನಂದ, ನಾಗೇಶ, ರಾಮಸ್ವಾಮಿ, ಯರ್ರಿಸ್ವಾಮಿ ಸೇರಿದಂತೆ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಹಾಗೂ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮದ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ