ಶನಿವಾರ, ಆಗಸ್ಟ್ 3, 2024
ಸರ್ಕಾರಿ ಆದರ್ಶ ವಿದ್ಯಾಲಯ; ಆ.13, 14 ರಂದು ಖಾಲಿ ಇರುವ ಸೀಟುಗಳಿಗೆ ಕೌನ್ಸಲಿಂಗ್
ಬಳ್ಳಾರಿ,ಆ.03(ಕರ್ನಾಟಕ ವಾರ್ತೆ):
ನಗರದ ಹಿರಾಳ್‌ಕುಡಂನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಪ್ರಸ್ತಕ ಸಾಲಿಗೆ 06 ನೇ ತರಗತಿ ದಾಖಲಾತಿಗಾಗಿ ಖಾಲಿ ಇರುವ 23 ಸೀಟುಗಳಿಗೆ ಆ.13 ಮತ್ತು 14 ರಂದು ಕೌನ್ಸಲಿಂಗ್ ಪ್ರಕ್ರಿಯೆ ನಡೆಯಲಿದ್ದು, ಈಗಾಗಲೇ ಖಾಲಿ ಇರುವ ಸೀಟುಗಳ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಜರಾಗಬೇಕು ಎಂದು ವಿದ್ಯಾಲಯದ ಮುಖ್ಯಗುರುಗಳು ತಿಳಿಸಿದ್ದಾರೆ.
ಈಗಾಗಲೇ ಖಾಲಿ ಇರುವ ಸೀಟುಗಳಿಗೆ 1, 2, 3 ನೇ ಸುತ್ತಿನ ದಾಖಲಾತಿ ಪೂರ್ಣಗೊಂಡು 23 ಖಾಲಿ ಸೀಟುಗಳು ಉಳಿದಿದ್ದು, ಈ ಸ್ಥಾನಗಳಿಗೆ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳ ಜೇಷ್ಠತೆ ಆಧಾರದ ಮೇಲೆ ವಿದ್ಯಾವಾಹಿನಿಯಲ್ಲಿ ಪ್ರಕಟಿಸಿರುವ 1:20 ಅನುಪಾತದ ಅರ್ಹ ಮಕ್ಕಳ ಪಟ್ಟಿಯನ್ನು ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಆ.13 ರಂದು ಬೆಳಿಗ್ಗೆ 10 ಗಂಟೆಗೆ 11 ಸಾಮಾನ್ಯ ಸೀಟುಗಳಿಗೆ ಹಾಗೂ ಆ.14 ರಂದು ಬೆಳಿಗ್ಗೆ 10 ಗಂಟೆಗೆ 12 ಮೀಸಲಾತಿ (ಎಸ್‌ಸಿ-03, ಎಸ್‌ಟಿ-03, ಪ್ರವರ್ಗ1- 01, 2ಎ-03, 3ಎ-02 ಸೀಟುಗಳು) ಇರುವ ಸೀಟುಗಳಿಗೆ ನಗರದ ಹಿರಾಳ್‌ಕುಡಂನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಕೌನ್ಸಲಿಂಗ್ ಪ್ರಕ್ರಿಯೆ ನಡೆಯಲಿದ್ದು, ಪಟ್ಟಿಯಲ್ಲಿರುವ ವಿದ್ಯಾರ್ಥಿಗಳು ಕೌನ್ಸಲಿಂಗ್‌ಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ.9449463870 ಗೆ ಸಂಪರ್ಕಿಸಬಹುದು ಎಂದು ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯಗುರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ