ಸೋಮವಾರ, ಆಗಸ್ಟ್ 19, 2024

ಯುವಕ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ಆ.19(ಕರ್ನಾಟಕ ವಾರ್ತೆ): ನಗರದ ರೂಪನಗುಡಿ ರಸ್ತೆಯ ರಾಜ್ಯೋತ್ಸವ ನಗರದ ಪ್ಲಂಬರ್ ಕೆಲಸ ಮಾಡುತ್ತಿದ್ದ ಎಂ.ಭೀಮಲಿAಗ ಎನ್ನುವ 24 ವರ್ಷದ ಯುವಕ ಆ.09 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ. ಚಹರೆ ಗುರುತು: ಎತ್ತರ 5.6 ಅಡಿ, ಅಗಲವಾದ ಮುಖ, ಗೋಧಿ ಮೈಬಣ್ಣ, ಬಲವಾದ ಮೈಕಟ್ಟು ಹೊಂದಿದ್ದು, ಕಪ್ಪು ತೆಲೆ ಕೂದಲು, ಗಡ್ಡ ಹೊಂದಿರುತ್ತಾನೆ. ಯುವಕ ಕಾಣೆಯಾದ ಸಂರ್ಧಬದಲ್ಲಿ ಕೇಸರಿ ಬಣ್ಣದ ತುಂಬು ತೋಳಿನ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದ್ದು, ಕನ್ನಡ, ಹಿಂದಿ, ತೆಲುಗು ಭಾಷೆ ಮಾತನಾಡುತ್ತಾನೆ. ಈ ಮೇಲ್ಕಂಡ ಚÀಹರೆ ಗುರುತುಗಳುಳ್ಳ ಯುವಕನ ಬಗ್ಗೆ ಮಾಹಿತಿ ಸಿಕಲ್ಲಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ದೂ.08392-272022 ಅಥವಾ ಪಿಐ ಮೊ.9480803045, 9480803081 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ