ಮಂಗಳವಾರ, ಆಗಸ್ಟ್ 20, 2024

ಅನಾಮಧೇಯ ವ್ಯಕ್ತಿ ಮೃತ; ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಆ.20(ಕರ್ನಾಟಕ ವಾರ್ತೆ): ನಗರದ ರೈಲ್ವೇ ಸ್ಟೇಷನ್ ಒಳಗಡೆ ಹೋಗುವ ರಸ್ತೆಯ ಫುಟ್ಪಾತ್ ಬಳಿ ಸುಮಾರು 60-65 ವರ್ಷದ ಅನಾಮಧೇಯ ವ್ಯಕ್ತಿ ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದು, ವ್ಯಕ್ತಿಯು ಟ್ರಾಮಾಕೇರ್ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕರಿಯಾಗದೇ ಆ.18 ರಂದು ಮೃತಪಟ್ಟಿದ್ದು, ವಾರಸುದಾರರು ತಿಳಿದಿರುವುದಿಲ್ಲ. ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಗಾಂಧಿನಗರ ಪೊಲೀಸ್ ಠಾಣೆ ಸಹಾಯಕ ಆರಕ್ಷರು ಉಪ ನಿರೀಕ್ಷಕರು ತಿಳಿಸಿದ್ದಾರೆ. ವ್ಯಕ್ತಿಯ ಚಹರೆ ಗುರುತು: ಎತ್ತರ 5.5 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕಪ್ಪು ಮತ್ತು ಬಿಳಿ ಕೂದಲು, ಕಪ್ಪು ಮತ್ತು ಬಿಳಿ ಮೀಸೆ ಹೊಂದಿರುತ್ತಾನೆ. ಮೃತನ ದೇಹದ ಮೇಲೆ ಬಿಳಿ ಬಣ್ಣದ ತುಂಬುತೋಳಿನ ಶರ್ಟ್, ಒಂದು ಕಟ್ ಬನಿಯನ್ ಧರಿಸಿರುತ್ತಾನೆ. ವ್ಯಕ್ತಿಯ ಗುರುತು ಬಲಕಣ್ಣಿನ ಹತ್ತಿರ ಒಂದು ಹಳೆ ಗಾಯದ ಗುರುತು ಇರುತ್ತದೆ. ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100, ಗಾಂಧಿನಗರ ಪೊಲೀಸ್ ಠಾಣೆ ದೂ.08392-272192, ಗಾಂಧಿನಗರ ಪೊಲೀಸ್ ಠಾಣೆ ಪಿ.ಐ ಮೊ.9480803046 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ