ಶನಿವಾರ, ಆಗಸ್ಟ್ 24, 2024
ವೃದ್ಧ ಕಾಣೆ; ಪತ್ತೆಗೆ ಮನವಿ
ಬಳ್ಳಾರಿ,ಆ.24(ಕರ್ನಾಟಕ ವಾರ್ತೆ):
ನಗರದಲ್ಲಿನ ಕೊಳಗಲ್ ರಸ್ತೆಯ ಇಂದಿರಾನಗರದ ನಿವಾಸಿ ಕೆ.ರಾಮಣ್ಣ ಎನ್ನುವ 78 ವರ್ಷದ ವೃದ್ಧ ಆ.22 ರಂದು ಕಾಣೆಯಾಗಿರುವ ಕುರಿತು ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಕೌಲ್‌ಬಜಾರ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್-ಪೆಕ್ಟರ್ ಮನವಿ ಮಾಡಿದ್ದಾರೆ.
*ಕಾಣೆಯಾದ ವ್ಯಕ್ತಿಯ ಚಹರೆ*
ಎತ್ತರ 5 ಅಡಿ 6 ಇಂಚು, ಸಾಧಾರಣ ಕಪ್ಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಬಿಳಿ ಮೀಸೆ, ಬಿಳಿ ಗಡ್ಡ ಬಿಟ್ಟಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಪಂಚೆ, ಬಿಳಿ ಶರ್ಟ್, ಹಾಗೂ ಕಪ್ಪು ಬಣ್ಣದ ಸ್ವೆಟರ್ ಧರಿಸಿರುತ್ತಾನೆ.
ಈ ಮೇಲ್ಕಂಡ ಚಹರೆ ಗುರುತುಳ್ಳ ವೃದ್ಧನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೌಲ್‌ಬಜಾರ್ ಪೊಲೀಸ್ ಠಾಣೆಯ ಪಿಐ ಮೊ:9480803047, ಪಿಎಸ್‌ಐ ಮೊ:9480803085 ಅಥವಾ cowlbazarblr@ksp.gov.in ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ