ಬುಧವಾರ, ಆಗಸ್ಟ್ 21, 2024
ಬಳ್ಳಾರಿ; ರಾಜ್ಯ ಮಟ್ಟದ “ಬಂಜಾರ ಸಾಹಿತ್ಯ ಮತ್ತು ಬದುಕು” ವಿಚಾರ ಸಂಕಿರಣ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಬಂಜಾರ ಪೀಠ: ಕುಲಪತಿ ಪ್ರೊ.ಮುನಿರಾಜು
ಬಳ್ಳಾರಿ,ಆ.21(ಕರ್ನಾಟಕ ವಾರ್ತೆ):
ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಲಂಬಾಣಿ ಕಲೆಗಳನ್ನು ಮುಖ್ಯವಾಹಿನಿಗೆ ಪರಿಚಯಿಸಲು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಬಂಜಾರ ಅಧ್ಯಯನ ಪೀಠ ಆರಂಭಿಸಲಾಗುವುದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರು ಹಾಗೂ ವಿಶ್ವವಿದ್ಯಾಲಯದ ಇಂಗ್ಲೀಷ್, ಕನ್ನಡ ಮತ್ತು ಪ್ರದರ್ಶನ ಕಲಾ ನಾಟಕ ಅಧ್ಯಯನ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಿಸ್ದ ರಾಜ್ಯ ಮಟ್ಟದ “ಬಂಜಾರ ಸಾಹಿತ್ಯ ಮತ್ತು ಬದುಕು” ಎಂಬ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುಲಸಚಿವ ಎಸ್.ಎನ್.ರುದ್ರೇಶ್ ಅವರು ಮಾತನಾಡಿ, ಬುಡಕಟ್ಟು ಜನಾಂಗಗಳ ಸಂಸ್ಕೃತಿ, ಉಪಸಂಸ್ಕೃತಿಗಳ ಪೋಷಣೆಗಾಗಿ ನಾವು ಶ್ರಮಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ವಿಭಾಗದ ಡಾ.ಸೋಮಶೇಖರ ಅವರು ಮಾತನಾಡಿ, ಲಂಬಾಣಿ ಜನಾಂಗದಲ್ಲಿ ಮದುವೆ ಶಾಸ್ತçಗಳು ವಿಶಿಷ್ಟವಾಗಿವೆ. ಬುಡಕಟ್ಟುಗಳಲ್ಲಿ ಮುಖ್ಯ ಸಂಸ್ಕೃತಿಯ ಅಡಿ ಉಪಸಂಸ್ಕೃತಿಗಳು ಹುಟ್ಟಿಕೊಂಡಿವೆ ಅವುಗಳನ್ನು ಸಂರಕ್ಷಿಸುವುದು ಇಂದಿನ ಅಗತ್ಯತೆ ಎಂದು ಹೇಳಿದರು.
ಕಲಾನಿಕಾಯದ ಡೀನ್ ಹಾಗೂ ಮುಖ್ಯಸ್ಥ ಪ್ರೊ.ಎಸ್.ಶಾಂತನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಲಿದ್ದ ಡಾ.ಲಕ್ಷಣ ನಾಯ್ಕ್ ಬೆಳಗಲ್ಲು, ಸುರೇಶನಾಯ್ಕ್, ಮೀಟ್ಯಾನಾಯ್ಕ್.ಎಲ್ ಸೇರಿದಂತೆ ಡಾ.ಕೆ.ಎಸ್.ಶಿವಪ್ರಕಾಶ, ಡಾ.ರಂಗನಾಥ್ ಹಾಗೂ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ