ಮಂಗಳವಾರ, ಆಗಸ್ಟ್ 20, 2024

ಅನಾಮಧೇಯ ಮಹಿಳೆ ಮೃತ: ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಆ.20(ಕರ್ನಾಟಕ ವಾರ್ತೆ): ಕಂಪ್ಲಿ ಪಟ್ಟಣದ ಕೊಟ್ಟಾಲ್ ರಸ್ತೆಯ ಸಾಯಿ ಬಾಬಾ ದೇವಸ್ತಾನದ ಮುಂದೆ ಹರಿಯುವ ಸಣಾಪುರ ಡಿಸ್ಟಬ್ಯೂಟರ್ ಕಾಲುವೆಯ ನೀರಿನಲ್ಲಿ ಸುಮಾರು 40-45 ವರ್ಷದ ಅನಾಮಧೇಯ ಮಹಿಳೆಯ ಶವ ಆ.8ರಂದು ಕಂಡುಬAದಿದ್ದು, ಮೃತಳ ಶವವನ್ನು ವಿಮ್ಸ್ ಆಸ್ಪತ್ರೆಯ ಶೀತಲ ಶವಗಾರ ಕೋಣೆಯಲ್ಲಿ ಇರಿಸಲಾಗಿದ್ದು, ಮೃತಳ ವಾರಸುದರರ ಪತ್ತೆಗೆ ಸಹಕರಿಸಬೇಕೆಂದು ಕಂಪ್ಲಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಮನವಿ ಮಾಡಿದ್ದಾರೆ. ಮೃತಳÀ ಮಹಿಳೆಯ ಚಹರೆ ಗುರುತು: ಎತ್ತರ 160 ಸೆಂಮೀ, ಕೋಲು ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಉದ್ದದ ಕಪ್ಪು ಕೂದಲುಗಳಿರುತ್ತವೆ. ಮೈಮೇಲೆ ಮೆರೂನ್ ರೆಡ್ ಬಣ್ಣದ ಕುಪ್ಪಸ, ಹಳದಿ ಕೆಂಪು ಚೌಕಳ್ಳಿವುಳ್ಳ ಬೂದು ಬಣ್ಣದ ಸೀರೆ, ಬಂಗಾರದAತಹ ಬಣ್ಣದ ಮಿಂಚುಳ್ಳ ನಸು ಹಳದಿ ಬಣ್ಣದ ಕೈ ಬಳೆಗಳು, ಕೊರಳಲ್ಲಿ ಕಪ್ಪು ಬಣ್ಣದ ದಾರ ಧರಿಸಿರುತ್ತಾಳೆ. ಮೃತಳ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಮೊ.8277977722, 9480803038 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ