ಗುರುವಾರ, ಆಗಸ್ಟ್ 22, 2024

ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಆ.22(ಕರ್ನಾಟಕ ವಾರ್ತೆ): ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೇದಾರ ಓಣಿಯ ಎದುರುಗಡೆಯ ರೈಲ್ವೇ ಕಾಂಪೌAಡ್ ಗೋಡೆ ಪಕ್ಕದ ಫುಟ್‌ಪಾತ್ ಹತ್ತಿರ 40 ರಿಂದ 45 ವರ್ಷದ ಅನಾಮದೇಯ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದು, ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಸಹಾಯಕ ಆರಕ್ಷಕರು ಉಪ ನಿರೀಕ್ಷಕರು ಮನವಿ ಮಾಡಿದ್ದಾರೆ. ಚಹರೆ ಗುರುತು: ಎತ್ತರ 5.4 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ತೆಳ್ಳನೇಯ ಮೈಕಟ್ಟು ಹೊಂದಿದ್ದು, ಬೋಳು ತಲೆ ಇರುತ್ತದೆ. ಮೃತನ ದೇಹದ ಮೇಲೆ ನೀಲಿ ಬಣ್ಣದ ಪಂಚೆ ಧರಿಸಿರುತ್ತಾನೆ. ಮೇಲ್ಕಂಡ ಮೃತನ ಚಹರೆ ಗುರುತುಗಳುಳ್ಳ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ: 08392-258100, ಗಾಂಧಿನಗರ ಪೊಲೀಸ್ ಠಾಣೆ ದೂ:08392-272192, ಪಿ.ಐ ಮೊ:9480803046 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ