ಗುರುವಾರ, ಆಗಸ್ಟ್ 22, 2024

ಕೃಷಿ ಇಲಾಖೆ; ಕೀಟ, ರೋಗ ಬಾಧೆ ಕಂಡುಬAದಲ್ಲಿ ಸೂಕ್ತ ನಿರ್ವಹಣಾ ಕ್ರಮ ಕೈಗೊಳ್ಳಿ

ಬಳ್ಳಾರಿ,ಆ.22(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಪ್ರಸ್ತುತ ಹಂತದಲ್ಲಿ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ ಮತ್ತು ತೊಗರಿ ಬೆಳೆಗಳಿಗೆ ಕೀಟ ಮತ್ತು ರೋಗ ಬಾಧೆಗಳು ಕಂಡುಬರುವ ಸಾಧ್ಯತೆ ಇದ್ದು, ಸೂಕ್ತ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಸೋಮಸುಂದರ್ ಅವರು ತಿಳಿಸಿದ್ದಾರೆ. ಮೆಕ್ಕೆಜೋಳ ಬೆಳೆಯು ಸುಮಾರು 50-60 ದಿನದ ಬೆಳೆಯಾಗಿದ್ದು, ಫಾಲ್ ಸೈನಿಕ ಹುಳು ಕಂಡುಬರುವ ಸಾಧ್ಯತೆ ಇದೆ. ಇದು ಪ್ರಾರಂಭಿಕ ಹಂತದಲ್ಲಿ ಎಲೆಯ ಮೇಲೆ ಬಿಳಿ ಮಚ್ಚೆಗಳು ಕಂಡುಬರುತ್ತವೆ. ನಂತರ ಉದ್ದವಾದ ರಂಧ್ರಗಳು, ಹಿಕ್ಕೆಯಿಂದ ಕೂಡಿದ ಹರಿದ ಎಲೆಗಳು ಕಾಣುತ್ತವೆ. *ಹತೋಟಿ ಕ್ರಮಗಳು:* ದೊಡ್ಡ ಹಂತದ ಮರಿಹುಳುಗಳು ಕಂಡುಬAದರೆ ಕೈಯಿಂದ ಆರಿಸಿ ನಾಶಪಡಿಸಬಹುದು. ಜೈವಿಕ ಶೀಲೀಂದ್ರ ಕೀಟನಾಶಕಗಳಾದ ನೊಮೊರಿಯಾ ರಿಲೈ ಅಥವಾ ಮೆಟಾರೈಜಿಯಮ್ ಅನಿಸೋಪ್ಲಿಯೆ ಯನ್ನು 2 ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬಹುದು. ಹೊಲದಲ್ಲಿ ದೀಪಾಕರ್ಷಕ ಬಲೆಗಳನ್ನು ಅಲ್ಲಲ್ಲಿ ಅಳವಡಿಸಿ ಪತಂಗಗಳನ್ನು ಆಕರ್ಷಿಸಿ ನಾಶಪಡಿಸಬಹುದು. ರಸಾಯನಿಕ ಕೀಟನಾಶಕಗಳಾದ ಇಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ @ 0.4 ಗ್ರಾಂ ನಷ್ಟು ಪ್ರತಿ ಲೀ. ನೀರಿಗೆ ಅಥವಾ ಕ್ಲೋರಾಂಟ್ರನಿಲಿಪ್ರೋಲ್ 18.5 ಎಸ್.ಸಿ @ 0.4 ಮಿ.ಲೀ ನಷ್ಟು ಪ್ರತಿ ಲೀ. ನೀರಿಗೆ ಅಥವಾ ಥಯೋಡಿಕಾರ್ಬ್ 75 ಡಬ್ಲೂö್ಯಪಿ @ 1 ಗ್ರಾಂ ನಷ್ಟು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು. *ತೊಗರಿ ಬೆಳೆ:* ತೊಗರಿ ಬೆಳೆಯು ಸುಮಾರು 50-60 ದಿನಗಳೊಳಗಾಗಿ ಬರುವ ಬೆಳೆಯಾಗಿದ್ದು, ಬಿತ್ತನೆಯಾದ 45-60 ದಿನಗಳ ಬೆಳೆಯ ಕುಡಿಯನ್ನು ಚಿವುಟುವುದರಿಂದ ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ. ಈ ಬೆಳೆಗೆ ಸೊರಗು ರೋಗ ಕಂಡುಬರುತ್ತದೆ. ಬಿತ್ತನೆಯಾದ 45-60 ದಿನಗಳಲ್ಲಿ ಸಸಿಗಳು ಬಾಡುತ್ತವೆ. ಹೂ ಬಿಡುವ ಹಂತದಲ್ಲಿ ಗಿಡಗಳು ಗುಂಪು ಗುಂಪಾಗಿ ಒಣಗುತ್ತವೆ ಇದು ಹಾನಿಯ ಲಕ್ಷಣವಾಗಿದೆ. *ಹತೋಟಿ ಕ್ರಮಗಳು:* ನೀರನ್ನು ಬಸಿಗಾಲುವೆ ಮುಖಾಂತರ ಹೊರ ಹಾಕಬೇಕು. ಬಾಧಿತ ಸಸಿಗಳನ್ನು ಕಿತ್ತುಹಾಕಿ ಸುಡುವುದು. ಕಾರ್ಬಂಡೆಜಿA ಶೇ 12 ಮತ್ತು ಮ್ಯಾಂಕೋಜೆಬ್ ಶೇ. 63 ರೋಗನಾಶಕವನ್ನು 3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಬಾಧಿತ ಗಿಡದ ಬುಡಕ್ಕೆ ನೀಡಬೇಕು. ಈ ರೀತಿಯಾಗಿ ಮೆಕ್ಕೆಜೋಳ ಮತ್ತು ತೊಗರಿ ಬೆಳೆಗಳಿಗೆ ಕೀಟ ಮತ್ತು ರೋಗ ಬಾಧೆಗಳು ಕಂಡುಬAದಲ್ಲಿ ಸೂಕ್ತ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಪ್ರಕಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ