ಮಂಗಳವಾರ, ಆಗಸ್ಟ್ 20, 2024
ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ; ಸಾಲ-ಸೌಲಭ್ಯಕ್ಕಾಗಿ ಅರ್ಜಿ ಅಹ್ವಾನ
ಬಳ್ಳಾರಿ,ಆ.20(ಕರ್ನಾಟಕ ವಾರ್ತೆ):
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ 2024-25ನೇ ಸಾಲಿನಲ್ಲಿ ಅರಿವು ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಮತೀಯ ಅಲ್ಪಸಂಖ್ಯಾತರಿAದ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2024-25ನೇ ಸಾಲಿನಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ಖ್, ಪಾರ್ಸಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಂದ ಅರಿವು (ರಿನ್ಯೂವಲ್ ಸಿಇಟಿ, ನೀಟ್) ಶೈಕ್ಷಣಿಕ ಸಾಲ ಯೋಜನೆಯಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಹತೆ:
ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ, ನೀಟ್, ಡಿ-ಸಿಇಟಿ, ಪಿಜಿ-ಸಿಇಟಿ ಯಲ್ಲಿ ಆಯ್ಕೆಯಾದ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳಾದ ವೈದ್ಯಕೀಯ (ಎಂಬಿಬಿಎಸ್, ಎಂಡಿ, ಎಂಎಸ್) ಹಾಗೂ ದಂತ ವೈದ್ಯಕೀಯ (ಬಿಡಿಎಸ್, ಎಂಡಿಎಸ್) ಹಾಗೂ ಬಿಇ, ಬಿಟೆಕ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಎಂ.ಆರ್ಕಿಟೆಕ್ಚರ್ ಮತ್ತು ಆಯುಷ್ (ಬಿಆಯುಷ್, ಎಂಆಯುಷ್), ಎಂಬಿಎ, ಎಂಸಿಎ, ಎಲ್‌ಎಲ್‌ಬಿ, ಬಿಎಸ್ಸಿ ಇನ್ ಹಾರ್ಟಿಕಲ್ಚರ್, ಅಗ್ರಿಕಲ್ಚರಲ್ ಇಂಜಿನಿಯರಿAಗ್, ಡೈರಿ ಟೆಕ್ನಾಲಜಿ, ಫಾರೆಸ್ಟಿç, ವೆಟೆರಿನರಿ ಅಂಡ್ ಅನಿಮಲ್ ಟೆಕ್ನಾಲಜಿ, ಫಿಶರಿಸ್ ಸೆರಿಕಲ್ಚರಲ್, ಬಿಫಾರ್ಮ್, ಎಂಫಾರ್ಮ್, ಫಾರ್ಮ ಡಿ ಅಂಡ್ ಡಿ.ಫಾರ್ಮ ಗಳಲ್ಲಿ ಆಯ್ಕೆಯಾಗಿರುವ ಅರ್ಹ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡಲಾಗುವುದು.
ದಾಖಲೆಗಳು:
ಬೊನಾಫೈಡ್ ಅಥವಾ ಅಧ್ಯಯನ ಪ್ರಮಾಣ ಪತ್ರ, ಕಾಲೇಜು ಶುಲ್ಕದ ವಿವರ, ಹಿಂದಿನ ವರ್ಷ ಪಾಸಾದ ಅಂಕಪಟ್ಟಿ, ಕಾಲೇಜು ಬ್ಯಾಂಕ್ ವಿವರ, ಭದ್ರತಾ ಠೇವಣಿ (ಸಾಲದ ಮೊತ್ತದ ಶೇ.12) ಪಾವತಿ ಮಾಡಿದ ರಶೀದಿ, ಕೆಇಎ ದಾಖಲಾತಿ ಆದೇಶ ಪ್ರತಿ, ವಿದ್ಯಾರ್ಥಿಯ ಸ್ವಯಂ ಘೋಷಣೆ ಪತ್ರ, ಪೋಷಕರ ಸ್ವಯಂ ಘೋಷಣೆ ಪತ್ರ.
ನಿಗಮದಿಂದ ಈ ಹಿಂದಿನ ವರ್ಷದಲ್ಲಿ ಪಡೆದಿರುವ ಒಟ್ಟು ಸಾಲದ ಬಾಕಿಯ ಮೊತ್ತದ ಶೇ.12 ರಷ್ಟು ಮೊತ್ತ ಆನ್‌ಲೈನ್ ಮುಖಾಂತರ ಪಾವತಿಸಬೇಕು ಅಥವಾ ಜಿಲ್ಲಾ ಕಚೇರಿಗೆ ಪಾವತಿಸಬೇಕು.
ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿದ್ದು, ಬೇರೆ ಬೇರೆ ವರ್ಷಗಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ರಿನ್ಯೂವಲ್ ಮೊತ್ತವನ್ನು ಪಾವತಿಸುವುದು ಅಗತ್ಯವಿರುವುದಿಲ್ಲ.
ಅರ್ಜಿ ಸಲ್ಲಿಸಲು https://kmdconline.karnataka.gov.in/ ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸ ಅಕ್ಟೋಬರ್ 31 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕಂಟೋನ್‌ಮೆAಟ್‌ನ ವಿಜಯನಗರ ಕಾಲೋನಿಯ ಹಳೇ ಮಾರುಕಟ್ಟೆ ರಸ್ತೆಯ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ)ದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ದೂ.08392-294370 ಗೆ ಸಂಪರ್ಕಿಸಬಹುದು ಎಂದು
ಅಲ್ಪಸAಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ