ಶುಕ್ರವಾರ, ಆಗಸ್ಟ್ 30, 2024

ವಿಜಯನಗರ ಶ್ರೀಕೃಷ್ಣದೇವರಾಯ ವಿವಿ; ಘಟಿಕೋತ್ಸವದ ಆಮಂತ್ರಣ ಪತ್ರ ಪಡೆಯಲು ಸೂಚನೆ

ಬಳ್ಳಾರಿ,ಆ.30(ಕರ್ನಾಟಕ ವಾರ್ತೆ): ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 12ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವು ಸೆ.06 ರಂದು ನಡೆಯಲಿದ್ದು, ಆಮಂತ್ರಣ ಪತ್ರ ತಲುಪದ ಚಿನ್ನದ ಪದಕ, ಪ್ರಥಮ ರ‍್ಯಾಂಕ್ ಬಹುಮಾನ ವಿಜೇತ ವಿದ್ಯಾರ್ಥಿಗಳು ಮತ್ತು ಪಿಎಚ್.ಡಿ ಪದವಿಗೆ ಅರ್ಹರಾಗಿರುವ ವಿದ್ಯಾರ್ಥಿಗಳು ಸೆಪ್ಟೆಂಬರ್ 3ರ ಒಳಗಾಗಿ ಕಚೇರಿ ಸಮಯದಲ್ಲಿ ಹಾಜರಾಗಿ ಪಡೆದುಕೊಳ್ಳಬೇಕು ಎಂದು ಮೌಲ್ಯಮಾಪನ ಕುಲಸಚಿವರು ತಿಳಿಸಿದ್ದಾರೆ. ಈಗಾಗಲೇ ಚಿನ್ನದ ಪದಕ, ರ‍್ಯಾಂಕ್ ಪಡೆದಿರುವ ವಿದ್ಯಾರ್ಥಿಗಳು ಮತ್ತು ಪಿಎಚ್.ಡಿ ಪದವಿಗೆ ಅರ್ಹರಾಗಿರುವ ವಿದ್ಯಾರ್ಥಿಗಳಿಗೆ ಪದವಿಗಳನ್ನು ಸ್ವೀಕರಿಸಲು ಸಮಾರಂಭಕ್ಕೆ ಹಾಜರಾಗುವಂತೆ ತಿಳಿಸಿ ಆಮಂತ್ರಣ ಪತ್ರ ಕಳುಹಿಸಲಾಗಿದೆ. ಆಮಂತ್ರಣ ಪತ್ರ ತಲುಪದ ಅರ್ಹ ವಿದ್ಯಾರ್ಥಿಗಳು (ಪ್ರಾಚಾರ್ಯರು ನೀಡಿರುವ ಗುರುತಿನ ಪತ್ರದೊಂದಿಗೆ) ಖುದ್ದಾಗಿ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ಕಚೇರಿಯಲ್ಲಿ ಪಡೆಯಬಹುದು ಎಂದು ಕುಲಸಚಿವರು (ಮೌಲ್ಯಮಾಪನ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ